ಆಳಂದ: ನ.26ಕ್ಕೆ ರೈತ ವಿರೋಧಿ ಸರ್ಕಾರ ನೀತಿಗಳ ವಿರುದ್ಧ ರಾಜ್ಯದಾದ್ಯಂತ ನಡೆಯುವ ಹೋರಾಟಕ್ಕೆ ಬೆಂಬಲಿಸುವಂತೆ ಮೌಲಾ ಮುಲ್ಲಾ ಕರೆ ನೀಡಿದರು.
ಆಳಂದ: ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ನ.26ರಂದು ರಾಜ್ಯದಾದ್ಯಂತ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದೆ ಎಂದು ಅಖಿಲ ಭಾರತ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಸಿಪಿಐ ಪಕ್ಷದ ಜಿಲ್ಲಾ ಮುಖಂಡ ಮೌಲಾ ಮುಲ್ಲಾ ಅವರು ಹೇಳಿದರು.
ಪಟ್ಟಣದಲ್ಲಿ ಈ ಕುರತು ಹೇಳಿಕೆ ನೀಡಿರುವ ಅವರು, ಸರ್ಕಾರದ ರೈತ ವಿರೋಧಿ ತಪ್ಪು ನೀರಿಗಳಿಂದಾಗಿ ರೈತರು ಕೃಷಿ ಕೈಗೊಳ್ಳಲಾಗದೇ ಬೀದಿಪಾಲಾಅಗುತ್ತಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ರೈತರ ವಾಣಿಜ್ಯ ಉತ್ಪಾದನೆಯ ಬೆಳೆಯ ಬೆಲೆ ಇಳಿಸಿ ಹೊರದೇಶದ ಬೇಳೆ, ಹತ್ತಿ ಈರುಳ್ಳಿ, ಸೋಯಾಭಿನ್ ಈ ಬೆಳೆಗಳನ್ನು ಆಮದುಮಾಡಿಕೊಂಡು ಇಲ್ಲಿನ ರೈತರ ಉತ್ಪನಕ್ಕೆ ಬೆಲೆ ಸಿಗದಂತೆ ನಷ್ಟಗೊಳಿಸಿ ಅವರ ಭೂಮಿ ಕಸಿದುಕೊಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಕೃಷಿ ಉತ್ಪನ್ನಗಳಿಗೆ ಎಂಎಸ್‍ಪಿ ಜಾರಿಗೊಳಿಸಬೇಕು ಹಾಗೂ ಆಮದು ನೀತಿ ಕೃಷಿ ಉತ್ಪನ್ನಗಳು ಆಮದು ಮಾಡಿಕೊಂಡರು ಸಹ ಇಲ್ಲಿನ ಉತ್ಪನಗಳ ಬೆಲೆ ಕುಸಿಯದಂತಾಗಬೇಕು. ಹೊರ ದೇಶದಲ್ಲಿ ಕೃಷಿ ಉತ್ಪಾದನೆಗಾಗಿ ಸುಸಜ್ಜವಾಗಿ ನೀರಾವರಿ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯವನ್ನು ಅಲ್ಲಿನ ಸರ್ಕಾರ ಮಾಡಿದ್ದರಿಂದ ಅಲ್ಲಿನ ರೈತರಿಗೆ ಹಾನಿಯಾಗುತ್ತಿಲ್ಲ. ಆದರೆ ಸರ್ಕಾರ ಇಲ್ಲಿನ ಕೃಷಿ ಉತ್ಪನ್ನ ಹೆಚ್ಚಿಸಲು ಬೇಕಾದ ನೀರಾವರಿ ವ್ಯವಸ್ಥೆ ಹಾಗೂ ರೈತರ ಸಾಮರ್ಥ ಅನುಸಾರ ಕೃಷಿ ಉಪಕರಣಗಳು ಹಾಗೂ ಎಂಎಸ್‍ಪಿ ವೈಜ್ಞಾನಿಕ ಜಾರಿಗೊಳಿಸುತ್ತಿಲ್ಲ. ಅಲ್ಲದೆ, ಎಕ್ಸಪೋರ್ಟ್, ಇಂಪೋರ್ಟ್ ಬೆಲೆ ಸಹ ಗಮನದಲ್ಲಿಟ್ಟುಕೊಂಡು ಇಲ್ಲಿನ ಕೃಷಿ ಉತ್ಪನ್ನ ಬೆಲೆಯನ್ನು ನಿಗಧಿಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ, ಚುನಾಯಿತ ನಾಯಕರು ಸರ್ಕಾರ ನೌಕರರು ಗುತ್ತಿಗೆದಾರರು ಇವರು ಮಾತ್ರ ಲಾಭದಾಯಕ ಪದ್ಧತಿ ಕಾರ್ಯವನ್ನು ಕೈಬಿಟ್ಟು ಜನರ ಹಿತದೃಷ್ಟಿಯಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃಷಿ ನೀತಿ ಸಫಲತೆ ಕೈಗೊಳ್ಳದೇ ಹೋದಲ್ಲಿ ರೈತರು ಕೇಂದ್ರ ರಾಜ್ಯ ಸರ್ಕಾರವನ್ನು ಕೆಳಗಿಳಿಸಲು ಸಜ್ಜಾಗುತ್ತಾರೆ. ಕೇಂದ್ರ ಸರ್ಕಾರ ಇಂಥ ಅನೇಕ ರೈತ ವಿರೋಧಿ ಕಾರ್ಯಕ್ಕೆ ರೈತರು ಸಿಡಿದೆಳಬೇಕಾಗಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ 26ರಂದು ಬೀದಿಗೆ ಬಂದು ಹೋರಾಟ ನಡೆಸಲಿದ್ದು, ರಾಜ್ಯದ ರೈತರು ಸಹ ಮುಂದಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಅವರು ಹೇಳಿದರು. .
ಈ ವೇಳೆ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಕಾರ್ಯದರ್ಶಿ ಕಮಲೇಶ ಅವುಟೆ, ಕಾರ್ಯಾಧ್ಯಕ್ಷ ಆರೀಫ್ ಅಲಿ ಲಂಗಡೆ ಜೊತೆಗಿದ್ದರು.
Comments are closed.