ಭೋವಿ ಜನಾಂಗ ಭಕ್ತಿಯೊಂದಿಗೆ ಶಿಕ್ಷಣಕ್ಕೂ ಆಧ್ಯತೆ ನೀಡಲು ಶ್ರೀಗಳ ಸಲಹೆ
ನಿಂಬರ್ಗಾದಲ್ಲಿ ಶ್ರೀ ಬಾಲಾಜಿ ಮೂರ್ತಿ ಪ್ರತಿಷ್ಠಾಪನೆ
ಆಳಂದ: ನಿಂಬರ್ಗಾ ಗ್ರಾಮದಲ್ಲಿ ಭೋವಿ ಸಮಾಜಜದಿಂದ ನಡೆದ ಶ್ರೀ ಬಾಲಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಶ್ರೀ ಶಿವಲಿಂಗ ದೇವರು ಮಾತನಾಡಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಗುಂಡಪ್ಪ ಸಾಳುಂಕೆ, ತಿಪ್ಪಣ್ಣಾ ಒಡೆಯರಾಜ ಇತರರು ಇದ್ದರು.
ಆಳಂದ: ಭೋವಿ ಜನಾಂಗವು ಮುಗ್ದ ಜನರಾಗಿದ್ದು ಭಯಭಕ್ತಿಯಿಂದ ಜೀವನ ಸಾಗಿಸುವರು. ಹೀಗಾಗಿ ಇವರು ಭಕ್ತಿಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಿದರೆ ಎಲ್ಲಾ ರಂಗದಲ್ಲೂ ಸಮಾಜ ಮುಂದೆ ಬರಲು ಸಾಧ್ಯವಿದೆ ಎಂದು ನಿಂಬರಗಾ ಶ್ರೀ ಹುಚ್ಚೇಶ್ವರ ಮಠದ ಶರಣಬಸವ ದೇವರು ಹೇಳಿದರು.
ನಿಂಬರ್ಗಾ ಗ್ರಾಮದ ಭೋವಿ ನಗರದಲ್ಲಿ ಭೋವಿ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡ ಶ್ರೀ ಬಾಲಾಜಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ದೇವ ನಾಮ ಸ್ಮರಣೆಯಿಂದ ಮಾನವರಲ್ಲಿ ಹೊಸ ಹೊಸ ಆಸೆಗಳು ಚಿಗುರುತ್ತವೆ. ಎಲ್ಲಿ ಭಕ್ತಿಯಿದೆಯೋ ಅಲ್ಲಿ ಮೊಸ ವಂಚನೆ ಇರುವುದಿಲ್ಲ. ಅವರು ಧಾನದರ್ಮದಲ್ಲಿ ಎತ್ತಿದ ಕೈ. ಇದರಿಂದ ಪ್ರತಿಯೊಬ್ಬರು ದುರಾಭಿಮಾನ ದುರಾಸೆಯನ್ನು ಬಿಟ್ಟು ಜೀವನ ಸಾಗಿಸಿದೆರೆ ಅವರ ಮೇಲೆ ಸಾಧು ಶರಣರ ಕೃಪಾಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಭೋವಿ ಸಮಾಜ ಸೇರಿದಂತೆ ತಾಲೂಕಿನಲ್ಲಿ ನಾಲ್ಕೈಯದು ಸಣ್ಣ ಸಮಾಜಗಳಿದ್ದು ಇವುಗಳ ಶ್ರೇಯೋಭಿವೃದ್ದಿಗಾಗಿ ಪ್ರತಿಯೊಬ್ಬರು ಒಂದುಗೂಡಿದರೆ ಸರ್ವಾಂಗೀಣ ಅಂಭಿವೃದ್ದಿ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಂಕರ್ ಮಶೀನಗಳು ಹಾವಳಿ ಹೆಚ್ಚಳವಾದ ಪರಿಣಾಮ ಭೋವಿ ಸಮಾಜದವರು ಮಾಡುವ ಉದ್ಯೋಗ ಕಡಿಮೆಯಾಗಿದೆ. ಮೂಲ ಉದ್ಯೋಗ ಕಳೆದುಕೊಂಡ ಜನರು ವಿವಿಧ ನಗರಗಳಿಗೆ ವಲಸೆ ಹೋಗುವ ಸ್ಥಿತಿ ಉಂಟಾಗಿದೆ. ಹೀಗಾಗಿ ಸಮಾಜದ ಜನರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ದೇಶದಲ್ಲಿ ಯಾವುದೇ ಭಾಗದಲ್ಲಿ ಬದುಕುವ ಶಕ್ತಿ ಅವರಲ್ಲಿ ಬರುತ್ತದೆ. ಸಮಾಜದ ಜನರು ಯಾವುದೇ ಕಷ್ಟ ತೆಗೆದುಕೊಂಡು ಬಂದರೂ ಅದನ್ನು ತಾವು ಪರಿಹರಿಸಲಾಗುವುದು ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಿಪ್ಪಣ್ಣಾ ಒಡೆಯರಾಜ, ರಾಜು ಚಹ್ಹಾಣ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭೋವಿ ವಡ್ಡರ ಸಮಾಜದ ಜಿಲಾಧ್ಯಕ್ಷ ಗುಂಡಪ್ಪ ಸಾಳುಂಕೆ, ತಾಲೂಕು ಅಧ್ಯಕ್ಷ ಭೀಮಣ್ಣಾ ಬನಪಟ್ಟಿ, ಚಂದ್ರಕಾಂತ ಭೂಸನೂರ, ಅಮೃತ ಬಿಬ್ರಾಣಿ, ಮಲ್ಲಿನಾಥ ವಡಿಯರ, ರಾಮಚಂದ್ರ ಅವರಳ್ಳಿ, ರಮೇಶ ಭೋವಿ ಕೋಡ್ಲಿ, ಮೋಹನ ರಾಠೋಡ, ಕಲ್ಯಾಣಿ ಆಲೂರೆ, ರಾಜು ಸಿಂಗೆ, ಶ್ರೀಕಾಂತ ಪಾಟೀಲ್,ಗುಂಡಪ್ಪ ಪೂಜಾರಿ,ಅಪ್ಪಸಾಬ ಜೀವಣಗಿ, ಟ್ರಸ್ಟ್ ಅಧ್ಯಕ್ಷ ಗಿರೇಪ್ಪ ಪಿರೋಜಿ, ದುರ್ಗಪ್ಪ
ಪಿರೋಜಿ, ಬರ್ಮಣ್ಣಾ ಕಾರಬಾರಿ, ಶಿವರಾಜ ಪಿರೋಜಿ, ರಾಮ ಗೋಡಕೆ, ಹಣಮಂತ ಪಿರೋಜಿ, ಸೇರಿದಂತೆ ಹಲವಾರು ಜನರು ಭಾಗವಹಿಸಿದರು.
Comments are closed.