Shubhashaya News

ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟಕ್ಕೆ ಸುನಿಲಕುಮಾರ ನೇಮಕ

ಆಳಂದ: ಪಟ್ಟಣದಲ್ಲಿ ದಲಿತ ಸೇನೆ ಸಭೆಯಲ್ಲಿ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರು ಸಂಘಟನೆಯ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸುನಿಲಕುಮಾರ ಎಂ. ಸಿಂಗೆ ಅವರನ್ನು ನೇಮಿಸಿ ಅಧಿಕಾರ ವಹಿಸಿದರು.

ಆಳಂದ: ಜಿಲ್ಲಾ ದಲಿತ ಸೇನೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ತಾಲೂಕಿನ ವೈಜಾಪೂರ ಗ್ರಾಮದ ಸುನಿಲಕುಮಾರ ಎಂ. ಸಿಂಗೆ ಅವರನ್ನು ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರು ನೇಮಿಸಿ ಅಧಿಕಾರ ವಹಿಸಿಕೊಟ್ಟರು.
ಪಟ್ಟಣದಲ್ಲಿ ಈಚೆಗೆ ನಡೆದ ದಲಿತ ಸೇನೆ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಅವರನ್ನು ನೇಮಿಸಿ ಅಧಿಕಾರ ವಹಿಸಿದ್ದ ಹನುಮಂ ಯಳಸಂಗಿ ಅವರು ಜನ ಸಾಮಾನ್ಯರು ಧ್ವನಿಯಾಗಿ ಕೆಲಸ ನಿರ್ವಹಿಸುವಂತೆ ಹೇಳಿದರು.
ಸಭೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ, ಉಪಾಧ್ಯಕ್ಷ ಚಂದ್ರಕಾಂತ ಹೊಸಮನಿ, ಆಳಂದ ತಾಲೂಕು ಅಧ್ಯಕ್ಷ ಚಂದ್ರಶಾ ಗಾಯಕವಾಡ ಮಾತನಾಡಿ ಸಂಘಟನೆ ರೂಪರೇಷಗಳ ಕುರಿತು ವಿವರಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಕಟ್ಟಿಮನಿ ಸೇರಿದಂತೆ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

Comments are closed.

Don`t copy text!