Shubhashaya News

ಸಂವಿಧಾನವನ್ನು ಅನುಷ್ಠಾನ ಪಾಲನೆಗೆ ಒಟ್ಟಾಗಬೇಕು: ಮೊದಲೇ

ಆಳಂದ: ಪಟ್ಟಣದ ರಿಪಬ್ಲಿಕನ್ ಯೂಥ್ ಫೆಡರೇಷನ್ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ನಿಮಿತ್ತ ಸಂವಿಧಾನ ಪೀಠಿಕೆ ಪ್ರತಿಯನ್ನು ಅಧ್ಯಕ್ಷ ಪ್ರವೀಣ ಮೊದ್ಲೆ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಸೇರಿ ಹಲವಡೆ ವಿತರಿಸಿದರು.

ಆಳಂದ: ಭಾರತೀಯ ಸಂವಿಧಾನ ಪಾಲನೆಗೆ ಎಲ್ಲರೂ ಒಟ್ಟಾಗಿ ಕಾರ್ಯರೂಪಕ್ಕೆ ತರಲು ಮುಂದಾಗಬೇಕಿದೆ ಎಂದು ರಿಪಬ್ಲಿಕನ್ ಯೂಥ್ ಫೆಡರೇಷನ್ ತಾಲೂಕು ಅಧ್ಯಕ್ಷ ಪ್ರವೀಣ ಮೊದ್ಲೆÉ ಅವರು ಹೇಳಿದರು.
ಪಟ್ಟಣದಲ್ಲಿ ರಿಪಬ್ಲಿಕನ್ ಯೂಥ್ ಫೆಡರೇಷನ್ (ರಿ) ತಾಲೂಕ ಸಮಿತಿ ವತಿಯಿಂದ 75ನೇ ಸಂವಿಧಾನ ದಿನಾಚರಣೆಯ ಅಂಗವಾಗಿ ವಿವಿಧ ಕಚೇರಿ ಶಾಲಾ, ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ಪೀಠಿಕೆ ಪ್ರತಿಗಳನ್ನು ವಿತರಿಸಿ ಅವರು ಮಾತನಾಡಿದರು.
“ನಮ್ಮ ಸಂವಿಧಾನವು ದೇಶದ ಎಲ್ಲ ನಾಗರಿಕರ ಹಕ್ಕುಗಳನ್ನು ಗೌರವಿಸುವ ಮೂಲಕ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಬದಲಿ ಮಾರ್ಗವನ್ನು ನೀಡುತ್ತದೆ. 75ನೇ ಸಂವಿಧಾನ ದಿನಾಚರಣೆಯಂದು, ನಾವು ಎಲ್ಲಾ ವ್ಯಕ್ತಿಗಳಿಗೆ ಹಕ್ಕುಗಳು, ಸನ್ಮಾನ ಮತ್ತು ಗೌರವವನ್ನು ನೀಡುವ ನಮ್ಮ ದೇಶದ ಮಹತ್ವವನ್ನು ಪರಿಚಯಿಸಲು ಒಂದು ಪ್ರಯತ್ನವನ್ನು ಮುಂದುವರೆಸುವುದು ಇಂದಿನ ಅಗತ್ಯವಿದೆ ಎಂದರು.
ಪರಸ್ಪರವಾಗಿ ಸಂವಿಧಾನದ ಮಹತ್ವವನ್ನು ಜನರಲ್ಲಿ ಜಾಗೃತಿಮಾಡಬೇಕು ಮತ್ತು ಈ ಉತ್ಸವವು ನಮ್ಮ ಜನ ಸಮುದಾಯದಲ್ಲಿ ಬದಲಾವಣೆಯನ್ನು ತರಲಿದೆ. “ನಾವು ಸಂವಿಧಾನದಿಂದ ಕಲಿಯಬಹುದಾದ ಪ್ರಮುಖ ಪಾಠವೇ ಆಗಿದ್ದು, ಇದು ನಮ್ಮ ದೇಶವನ್ನು ಪ್ರಜಾಪ್ರಭುತ್ವದ ಮೂಲಕ ಪ್ರಗತಿಪಡಿಸಲು ಶಕ್ತಿ ನೀಡುತ್ತದೆ. ಇದರಲ್ಲಿ ವ್ಯಕ್ತಿಯ ಹಕ್ಕುಗಳು, ಭದ್ರತೆ, ಧರ್ಮನಿರಪೇಕ್ಷತೆ ಹಾಗೂ ಸಮಾನತೆ ಅತಿ ಮುಖ್ಯವಾಗಿವೆ. ಇಂದು, ನಾವು ಎಲ್ಲರೂ ಒಟ್ಟಾಗಿ ಸಂವಿಧಾನವನ್ನು ಗೌರವಿಸಿ, ಅದರ ಅನುμÁ್ಠನವನ್ನು ನಮ್ಮ ಜೀವನದಲ್ಲಿ ಪಾಲಿಸಲು ಸಮಾರೋಪಾದಿಯಲ್ಲಿ ಪ್ರತಿಜ್ಞೆ ನಡೆಯಲಿ ಎಂದರು.
ಈ ಕಾರ್ಯಕ್ರಮದಲ್ಲಿ ಯುವ ಘಟಕ ಅಧ್ಯಕ್ಷ ಮಿಲಿಂದ ಮೊಘಾ, ಲಹುಜಿ ಶಕ್ತಿ ಸೇನಾ ಜಿಲ್ಲಾಧ್ಯಕ್ಷ ಪ್ರಕಾಶ ಪಾತ್ರೆ, ಸಂತೋಷ ವಟಾರೆ ಸೇರಿದಂತೆ ಮತ್ತಿತರ ನಾಯಕರು ಹಾಗೂ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಸಾಮಾಜಿಕ ಜಾಗೃತಿ ಮೂಡಿಸುವ ಹಲವು ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ನೆರವೇರಿಸಿದರು. ತಹಸೀಲ್, ಸಮಾಜ ಕಲ್ಯಾಣ, ಸಿಡಿಪಿಒ ಸೇರಿ ಹಲವು ಸರ್ಕಾರಿ ಮತ್ತು ಸಾರ್ವಜನಿಕ ಕಚೇರಿ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ಪೀಠಿಗೆ ಪ್ರತಿಯನ್ನು ವಿತರಿಸಿ ಕಾರ್ಯಕರ್ತರು ಜಾಗೃತಿ ಮೂಡಿಸಿದರು.

Comments are closed.

Don`t copy text!