ಆಳಂದ: ಗ್ರಾಪಂಗಳಲ್ಲಿ ಮನೆ, ನಿವೇಶನ ಹಾಗೂ ಕಾಮಗಾರಿಗಳ ಬಿಲ್ ಪಾವತಿ ಹಾಗೂ ರೈತರ ಹೊಲಗಳಲ್ಲಿ ಕಾಮಗಾರಿಗಳ ಆಯ್ಕೆಯಲ್ಲೂ ಪರೋಪಕ್ಷ ಅಪರೋಕ್ಷವಾಗಿ ಲಂಚದ ಬೇಡಿಕೆಯ ಇಡುತ್ತಿರುವ ಅಧಿಕಾರಿಗಳ ವಿರುದ್ಧ ಕಲಬುರಗಿ ಲೋಕಾಯುಕ್ತರು ಗ್ರಾಪಂವೊಂದರ ಅಭಿವೃದ್ಧಿ ಅಧಿಕಾರಿಯ ಮೇಲೆ ದಾಳಿ ನಡೆಸುವ ಮೂಲಕ ತಾಲೂಕಿನ ಗ್ರಾಪಂ ಆಡಳಿತ ವ್ಯವಸ್ಥೆಗೆ ಬುಧವಾರ ಬಿಸಿಮುಟ್ಟಿಸಿದ್ದಾರೆ.
ತಾಲೂಕಿನ ಹೆಬಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮ್ಮಣ್ಣಾ ಧನ್ನಿ ಎಂಬುವರು ಮನೆಯೊಂದರ ಮೂಟೇಶನ್ ನೀಡುವ ವಿಷಯದಲ್ಲಿ ಲಂಚದ ಬೇಡಿಕೆಯ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಹಣದ ಸಮೇತ ಆರೋಪಿತನಿಗೆ ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ.
Next Post
Comments are closed.