Shubhashaya News

ನಿಂತ ಲಾರಿಗೆ ಕ್ರೋಜರ್ ಡಿಕ್ಕಿ ಇಬ್ಬರ ಸಾವು

ವಾರದಲ್ಲೇ ಮೊತ್ತೊಂದ ಅಪಘಾತ

ಆಳಂದ: ತಾಲೂಕಿನ ಜಿಡಗಾ ಕ್ರಾಸ್ ಸಮೀಪದಲ್ಲಿ ನಡೆದ ಅಘಾತ ಸ್ಥಳಕ್ಕೆ ಜಿಲ್ಲಾ ಎಸ್‍ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲಿಸಿದರು. ಪಿಐ ಶರಣಬಸಪ್ಪ ಕೊಡ್ಲಾ ಜೊತೆಗಿದ್ದರು.

ಆಳಂದ: ತಾಲೂಕಿನಿಂದ ಹಾದು ಹೋಗಿರುವ ವಾಗ್ದರಿ, ರಿಬ್ಬನಪಲ್ಲಿ ಹೆದ್ದಾರಿಯ ಜಿಡಗಾ ಕ್ರಾಸ್ ಸಮೀಪದ ಈ ಹೆದ್ದಾರಿಯಲ್ಲಿ ನಿಂತ ಲಾರಿಗೆ ಕ್ರೋಜರ್ ಡಿಕ್ಕಿಹೊಡೆದ ಪರಿಣಾಮ ಕ್ರೋಜರ್‍ನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಅಲ್ಲದೆ 10 ಜನರಿಗೆ ಗಾಯವಾದ ಘಟನೆ ಶನಿವಾರ ನಡೆದಿದೆ.
ಸೋಲಾಪೂರದ ನಿವಾಸಿ ಕಾಶಿಬಾಯಿ ಚವ್ಹಾಣ (60), ಅಂಬಾದಾಸ ಚವ್ಹಾಣ (50), ಮೃತದುರ್ದೈವಿಗಳಾಗಿದ್ದಾರೆ.
ಕ್ರೋಸರ್ ಆಳಂದ ಮಾರ್ಗವಾಗಿ ಸೋಲಾಪೂರಕ್ಕೆ ಹೊರಟ್ಟಿದ್ದ ಸಂದಂರ್ಭದಲ್ಲಿ ಜಿಡಗಾ ಕ್ರಾಸ್ ಸಮೀಪದಲ್ಲಿ ಈ ಘಟನೆ ನಡೆದಿದೆ. ಕ್ರೋಸರನಲ್ಲಿದ್ದ ಪ್ರಯಾಣಿಕರು ಸೋಲಾಪೂರನಿಂದ ತೆಲಾಂಗಣದಲ್ಲಿನ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತೆರಳಿ ಬರುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.
ಕ್ರೋಸರ್ ಚಾಲಕ ಪರಾರಿಯಾಗಿದ್ದು, ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‍ಪಿ ಗೋಪಿ ಬಿ.ಆರ್. ಆಳಂದ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಅವರು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಹೆದ್ದಾರಿಯ ಹಿರೋಳಿ ಗಡಿ ಸಮೀಪದ ವಾಗ್ದರಿ ಬಳಿಯಲ್ಲಿ ಟ್ಯ್ರಾಕ್ಟರ್ ಮತ್ತು ಸಿಮೆಂಟ್ ಲಾರಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಮರುಕಳಿಸುವ ಮೊದಲೇ ಮತ್ತೊಂದು ಘಟನೆ ಸಂಭವಿಸಿದೆ.

Comments are closed.

Don`t copy text!