ಕಲಬುರಗಿ : ಕಲಬುರಗಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ,
ಪಿಯುಸಿ ಸೈನ್ಸ್ ನಲ್ಲಿ ಓದುತ್ತಿರುವ ನಮೀರಾ ಆಳಂದ ಪಟ್ಟಣದಿಂದ ಕಲಬುರಗಿಗೆ ಬಂದಿದ್ದು, ನಂತರ ಹಾಸ್ಟೆಲ್ ನ ರೂಮಿನಲ್ಲಿ ಯಾರೂ ಇರದೇ ಇದ್ದಾಗ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.