ಆಳಂದ: ಮಾಡಿಯಾಳ ಗ್ರಾಮದ ಏಳಕೋಟಿ ಮಲ್ಲಯ್ಯನ ದೇಗುಲ ನೋಟ್.
ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದ ಏಳಕೋಟಿ ಮಲ್ಲಯ್ಯನ ಜಾತ್ರೆಯೂ ಡಿ.7ರಂದು ಶನಿವಾರ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ.
ಬೆಳಿಗ್ಗೆ 4:00ಗಂಟೆಗೆ ಮಲ್ಲಯ್ಯನ ಪ್ರತಿಮೆಗೆ ಭಕ್ತರಿಂದ ಮಹಾರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 1:00ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಮಲ್ಲಯ್ಯನ ವಗ್ಗ್ಯಾಗಳಿಂದ ಸಾಂಪ್ರದಾಯಿಕ ಕುಣಿತ ಮತ್ತು ಭಕ್ತಿಯ ಗಾಯನಗಳು ನಡೆಯಲಿವೆ.
ಸಂಜೆ 7:00 ಗಂಟೆಗೆ ನಂದಿಕೋಲ ಮೇರವಣಿಗೆ ಮತ್ತು ಮದ್ದು ಸುಡುವ ಕಾರ್ಯಕ್ರಮ ಜರುಗುಲಿದೆ. ಗ್ರಾಮದಿಂದ 2 ಕಿಮೀ. ದೂರದಲ್ಲಿರುವ ಬೆಟ್ಟದ ಮಲ್ಲಯ್ಯನು ದೇಗುಲ ನೋಡಲು ಗರ್ಭಗುಡಿ ಭಕ್ತರ ಕಣ್ಮನ ಸೆಳೆಯುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ಯಾರೂ ನೇರ ಪ್ರವೇಶ ಮಾಡಲು ಬರುವುದಿಲ್ಲ. ಸುಮಾರು ಮೆಟಿಲುಗಳನ್ನು ಹತ್ತಿ ಒಳಬರಬೇಕು. ಒಳ ಪ್ರವೇಶ ಮಾಡಲು ಏಳೂ ಬಾಗಿಲುಗಳನ್ನು ದಾಟಿ ಪ್ರವೇಶ ಮಾಡಿದ ನಂತರ ಮಲ್ಲಯ್ಯನ ದರ್ಶನ ಮಾಡಲು ಸಾಧ್ಯವಾಗುತ್ತದೆ.
ದೇವಾಲಯ ವಿಶೇಷ:
ದೇವಾಲಯದ ಪಕ್ಕದಲ್ಲಿ ಗಂಗೆ ಮಾಳಮ್ಮ, ಖಂಡೋಬ, ಹೆಗ್ಗಣ ದೇವತೆಗಳು ಅಕ್ಕಪಕ್ಕದಲ್ಲಿವೆ. ಏಳಕೋಟಿ ಏಳಕೋಟಿಗೇ ಎಂಬ ಜೈಕಾರ ಹಾಕುವ ಮೂಲಕ ಮಲ್ಲಯ್ಯನು ಕಷ್ಟಕಾಲದಲ್ಲಿ ತಿರುಪತಿ ತಿಮಪ್ಪನ ಬಳಿ 7ಕೋಟಿ ರೂ. ಸಾಲ ಪಡೆದನು. ಆದರೆ ಪಡೆದ ಸಾಲ ಮರುಳಿ ಕೊಡಲಲ್ಲ. ತಿಮಪ್ಪನು ತಾನು ಕೊಟ್ಟ ಸಾಲ ವಾಪಸ ಕೇಳಲು ಬಂದಾಗ ನನ್ನ ಹತ್ತಿರ ನಿನಗೆ ಕೊಡಲು ದುಡ್ಡಿಲ್ಲ. ನಾನು ಕಷ್ಟದಲಿದ್ದೆನೆ. ಏಳಕೋಟಿ ಏಳಕೋಟಿಗೇ ಎನ್ನುತ್ತಾನೆ. ಮುಂದೆ ಇದನ್ನೆ ಮಲ್ಲಯ್ಯನ ಭಕ್ತರು ಜೈಕಾರವನ್ನಾಗಿಸಿದ್ದಾರೆ.
ಶನಿವಾರ ಬೆಳಿಗ್ಗೆಯಿಂದಲೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಅಪಾರ ಭಕ್ತರು ಏಳಕೋಟಿ ಏಳಕೋಟಿ ಗೇ ಎಂಬ ಜಯಕಾರದೊಂದಿಗೆ ಕಡಬ, ಭಜಿ, ಹೋಳಿಗೆ, ಸಜ್ಜಿ ರೋಟ್ಟಿ,ಪುಂಡಿಪಲ್ಯ ವಿವಿಧ ಬಗೆಯ ನೈವೇದ್ಯದ ಬುತ್ತಿಯೊಂದಿಗೆ ಹಳ್ಳಿಯ ಸೋಬಗಿನಲ್ಲಿ ಬಂದು ಮಲ್ಲಯ್ಯನಿಗೆ
ಅರ್ಪಿಸುವರು. ತಮ್ಮ ಬಂಧು ಬಳಗದವರಿಗೆ ಮತ್ತು ಭಕ್ತರಿಗೂ ಅನ್ನ ಪ್ರಸಾದ ಉಣಬಡಿಸುವುದು ಜಾತ್ರೆಯ ವಿಶೇಷವಾಗಿದೆ.
ಜಾತ್ರಾಗೆ ಬಂದ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರುವ, ಪ್ರಸಾದ ವ್ಯವಸ್ಥೆ ಹಾಗೂ ವಾನಗಳ ನಿಲುಗಡೆಗೆ ಪಾರ್ಕಿಕಿಂಗ ವ್ಯವಸ್ಥೆ ಮಾಡಲಾಗುವುದು ಎಂದು ಸಮಿತಿಯ ಶಿವಾನಂದ ಪೊಲೀಸ್ ಪಾಟೀಲ್, ನಿಂಗಣ್ಣ ಮಾಸ್ಟರ್ ಕಂಬಾರ ಮತ್ತು ಲಾಲು ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.