ಆಳಂದ: ಸಿಯುಕೆಯಲ್ಲಿ ನಡೆದ ಮಹಾಪರಿನಿರ್ವಾಹಣ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಸುಭಾಶ್ಚಂದ್ರ ರಾಥೋಡ, ಕುಲಸಚಿವ ಆರ್.ಆರ್. ಬಿರಾದಾರ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಂಡರು.
ಆಳಂದ: ನಮ್ಮ ಸಂವಿಧಾನದ ಪ್ರತಿಯೊಂದು ವಿಧಿಯು ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯಗಳು ಮತ್ತು ಭಾವನೆಗಳನ್ನು ಹೇಳುತ್ತವೆ” ಇವುಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಸಿಯುಕೆಯ ಕಾನೂನು ವಿಭಾಗದ ಅಭ್ಯಾಸ ಪ್ರಾಧ್ಯಾಪಕರಾದ ಶ್ರೀ ಸುಭಾಶ್ಚಂದ್ರ ರಾಥೋಡ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ಅಂಗವಾಗಿ 68ನೇ ಮಹಾಪರಿನಿರ್ವಾಣ ದಿನದ ಆಚರಣೆಯಲ್ಲಿ ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರು ನಮ್ಮ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನಮ್ಮ ಸಮಾಜದ ಸಾಮಾಜಿಕ ಅನಿಷ್ಟಗಳಿಂದಾಗಿ ಅವರು ತಮ್ಮ ಜೀವನದಲ್ಲಿ ತೀವ್ರ ಕಷ್ಠ ಮತ್ತು ನೋವುಗಳನ್ನು ಅನುಭವಿಸಿದ್ದಾರೆ. ಅವರು ಅನುಭವಿಸಿದ ಸಂಕಷ್ಟಗಳನ್ನು ಭವಿಷ್ಯದ ಪೀಳಿಗೆ ಎದುರಿಸದಂತೆ ನೋಡಿಕೊಂಡಿದ್ದಾರೆ. ಅತ್ಯಂತ ದುರದೃಷ್ಟಕರ ಪರಿಸ್ಥಿತಿ ಎಂದರೆ ಸಂವಿಧಾನದ ಆಶಯವನ್ನು ಅಕ್ಷರಶಃ ಅಳವಡಿಸಲು ನಮಗೆ ಸಾಧ್ಯವಾಗುತ್ತಿಲ್ಲ. ತಾರತಮ್ಯ, ಭ್ರμÁ್ಟಚಾರ, ಮಹಿಳೆಯರ ಮೇಲಿನ ಕಿರುಕುಳ, ಅಪರಾಧಗಳಂತಹ ಸಾಮಾಜಿಕ ಅನಿಷ್ಟಗಳು ಹೆಚ್ಚುತ್ತಿವೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ನಮ್ಮ ಶಾಲೆಗಳು, ಕಾಲೇಜುಗಳು ಮತ್ತು ಪೆÇೀಷಕರು ಮಕ್ಕಳಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಬೆಳೆಸಬೇಕು ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಬೇಕು; ಇಲ್ಲದಿದ್ದರೆ ಭವಿಷ್ಯವು ತುಂಬಾ ಕತ್ತಲೆಯಾಗುತ್ತದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕ ಪೆÇ್ರ.ದೇವರಾಜಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಡಾ.ಸೈಲಜಾ ಕೊನೆಕ್ ಕಾರ್ಯಕ್ರಮ ನಿರೂಪಿಸಿದರು, ಡಾ.ನಿತಿನ್ ಬಿ ವಂದಿಸಿದರು. ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಪೆÇ್ರ.ಜಿ.ಆರ್.ಅಂಗಡಿ, ಪೆÇ್ರ.ಎಂ.ಎಸ್.ಪಾಸೋಡಿ, ಹಣಕಾಸು ಅಧಿಕಾರಿ ರಾಮದೊರೈ, ಸಿಒಇ ಕೋಟ ಸಾಯಿಕೃಷ್ಣ, ಡಾ.ಪಿ.ಎಸ್.ಕಟ್ಟಿಮನಿ, ಪೆÇ್ರ.ಎ.ಎನ್.ವಿಜಯಕುಮಾರ್, ಡಾ.ಪಾಂಡುರಂಗ ಪತ್ತಿ, ಡಾ.ಬಸವರಾಜ ಕುಬಕಡ್ಡಿ, ಎಲ್ಲ ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.