Shubhashaya News

ಸಂವಿಧಾನ ಕುರಿತು ಕಾಂಗ್ರೆಸ್ ಸುಳ್ಳು ಆರೋಪ: ಗುತ್ತೇದಾರ

ಆಳಂದ: 68ನೇ ಮಹಾಪರಿನಿರ್ವಾಣ ಅಂಗವಾಗಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮತ್ತವರ ಬಿಜೆಪಿ ಕಾರ್ಯಕರ್ತರು ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಕೈಗೊಂಡು ನಮನ ಸಮರ್ಪಿಸಿದರು.

ಆಳಂದ: ಭಾರತೀಯ ಜನತಾ ಪಾರ್ಟಿ ಆಳಂದ ಮಂಡಲವು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಅವರ ಗೃಹ ಕಛೇರಿಯಲ್ಲಿ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರವರ 68ನೇ ಮಹಾ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಂಡಿತ್ತು.
ಈ ಸಂದರ್ಭ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಡಾ. ಬಾಬಾ ಸಾಹೇಬ ಅಂಬೇಡ್ಕರವರ ಬಗ್ಗೆ ಗೌರವ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕರು, ಡಾ. ಅಂಬೇಡ್ಕರವರು ರಚಿಸಿದ ಸಂವಿಧಾನದ ಮೂಲಕ ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಮತದಾನ ಹಕ್ಕು ಮತ್ತು ಸಮಾನ ಅವಕಾಶಗಳು ನೀಡಲ್ಪಟ್ಟಿದ್ದವು. ಅವರು, “ಕಾಂಗ್ರೇಸಿನವರು ಪ್ರತಿಯೊಂದು ಚುನಾವಣೆಯಲ್ಲಿ ಬಿಜೆಪಿಯವರ ಮೇಲೆ ಸಂವಿಧಾನ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮೋದಿ ಅವರು 3ನೇ ಸಲ ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿರುವುದ್ದರು ಸಂವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ,” ಎಂದು ಹೇಳಿದರು.

ಪ್ರಾಸ್ತವಿಕವಾಗಿ, ತಾಲ್ಲೂಕು ಎಸ್‍ಸಿ ಮೋರ್ಚಾ ಅಧ್ಯಕ್ಷ ರಾಜಕುಮಾರ ಘೂಳ, ಮಾಜಿ ಅಧ್ಯಕ್ಷ ಆನಂದ ಪಾಟೀಲ, ಜಿಲ್ಲಾ ಎಸ್‍ಸಿ ಮೋರ್ಚಾ ಉಪಾಧ್ಯಕ್ಷರು ಸುನಿಲ ಹಿರೋಳಿಕರ, ಅಂಬರಾಯ ಚಲಗೇರಾ, ಪುರಸಭೆ ಸದಸ್ಯರು ಶಿವಪುತ್ರ ನಡಗೇರಿ, ಮೊದಲಾದವರು ಕೂಡ ಮಾತನಾಡಿದರು.
ಸಭೆಯ ಅಧ್ಯಕ್ಷತೆ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸಂತೋಷ ಹಾದಿಮನಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ, ಬಿಜೆಪಿ ಮುಖಂಡ ಶ್ರೀಶೈಲ ಖಜೂರಿ, ಪುರಸಭೆ ಸದಸ್ಯರು ಮೃತ್ಯಂಜಯ ಅಲೂರೆ, ಬಸವರಾಜ ಸಾಣಕ, ಕಲ್ಯಾಣಿ ದೇವಂತಗಿ, ಬೋಜರಾಜ ಜುಬ್ರೆ, ಆಕಾಶ ಪಾತ್ರೆ, ಸಂದೀಪ ನಾಯಕ್, ಬಿರಣ್ಣಾ ಪೂಜಾರಿ, ಚಂದ್ರಶಾ ಹೊನ್ನಗಂಟಿ, ದತ್ತಾ ಕೊಚ್ಚಿ, ನಾಗರಾಜ ದೇನಕ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.ವಿಜಯಕುಮಾರ ಗೂಳಗಿ ವಂದಿಸಿದರು. ಸುನಿಲ ಹಿರೋಳಿ ನಿರೂಪಿಸಿದರು. ಬಳಿಕ ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿ ಬಿಜೆಪಿ ಮುಖಂಡರು ತಾಲೂಕು ಆಡಳಿತ ಸೌಧನಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಕೈಗೊಂಡು ನಮನ ಸಲ್ಲಿಸಿದರು.

Comments are closed.

Don`t copy text!