Shubhashaya News

ತೊಗರಿ ಬೆಳೆ ನಾಶ: ರೈತರಿಗೆ ಎಕರೆಗೆ ₹20,000 ಪರಿಹಾರಕ್ಕೆ ಒತ್ತಾಯ 

ಆಳಂದ: ತೊಗರಿ ಬೆಳೆ ಹಾನಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಜನಪರ ಕಲ್ಯಾಣ ವೇದಿಕೆಯ ಅಧ್ಯಕ್ಷ ಶರಣ ಕುಲಕರ್ಣಿ ನೇತೃತ್ವದಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿಗೆ ಮನವಿ ಸಲ್ಲಿಸಲಾಯಿತು.
ಆಳಂದ: ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ರೈತರ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿ ನಷ್ಟ ಅನುಭವಿಸಿದ್ದು, ಸರ್ಕಾರ ಈ ಕೂಡಲೇ ಪರಿಹಾರ ಮತ್ತು ಬೆಳೆ ವಿಮೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆಯ ಇಂದಿಲ್ಲಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧ ಮುಂಭಾಗದಲ್ಲಿ ಬೇಡಿಕೆಯ ಕುರಿತು ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಮೂಲಕ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದರು.
ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲ್ಕರ್ಣಿ, ಜೈರಾಮ್ ರಥೋಡ್, ಅನಿಲ್ ಕಾಟೇ, ಸಂತೋμï, ಸಾವನ್ ರಾಥೋಡ್ ಸೇರಿ ಹಲವು ಸದಸ್ಯರು ಈ ಮನವಿಯನ್ನು ಪ್ರಾಮುಖ್ಯತೆಯಿಂದ ಅಧಿಕಾರಿಗಳಿಗೆ ಮಂಡಿಸಿದರು. ತಾಲೂಕಿನ ಹಳ್ಳಿಗಳಲ್ಲಿ ನೇಟಿ ರೋಗದಿಂದ ತೊಗರಿ ಬೆಳೆ ಸಂಪೂರ್ಣ ನಾಶವಾದುದಕ್ಕೆ ರೈತರಿಗೆ ಸರ್ಕಾರ ತಕ್ಷಣ ಪರಿಹಾರದ ಒತ್ತಾಯವನ್ನು ನೀಡಿ ಅವರ ಮುಂದಿನ ಕೃಷಿ ಹಂಗಾಮಿಗೆ ಅನುಕೂಲ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಬೆಳೆಯ ಸಂಪೂರ್ಣ ನಾಶವು ರೈತರಿಗೆ ಆರ್ಥಿಕ ಸಂಕಷ್ಟವನ್ನು ತರುತ್ತಿದ್ದು, ಸರ್ಕಾರವು ತಕ್ಷಣ ಎಚ್ಚೆತ್ತು, ಎಕರೆಗೆ ₹20,000 ಪರಿಹಾರ ಘೋಷಿಸಬೇಕೆಂದು ಸಂಘದ ಪ್ರಮುಖರು ಮನವಿ ಸಲ್ಲಿಸಿ ರೈತರು ನ್ಯಾಯಕ್ಕಾಗಿ ನೀಡಿರುವ ಈ ಮನವಿಗೆ ತುರ್ತಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

Comments are closed.

Don`t copy text!