ಆಳಂದ: ಶೈಕ್ಷಣಿಕ ಬೋಧನೆಗೆ ಒತ್ತು ನೀಡಬೇಕಿದ್ದ ಶಿಕ್ಷಕರಿಗೆ ಬಿಸಿಯೂಟ ಆಹಾರ ವಿತರಣೆ ಸಮಯ ನೀಡುವುದು ತೊಂದರೆಯಾಗಿ ಮಾರ್ಪಟ್ಟಿದೆ. (ಸಾಂದರ್ಭಿಕ ಚಿತ್ರ)
ಆಳಂದ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪಿಎಂ ಪೆÇೀಷಣಾ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಮೊಟ್ಟೆ ಭಾಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ಉದ್ದೇಶ ಮಕ್ಕಳ ರಕ್ತಹೀನತೆ, ಪೆÇೀಷಕಾಂಶಗಳ ಕೊರತೆಯನ್ನು ನಿವಾರಿಸುವುದು ಹಾಗೂ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಸುಧಾರಿಸುವುದು. ಆದರೆ, ಈ ಯೋಜನೆಯ ನಿರ್ವಹಣೆ ಶಿಕ್ಷಕರಿಗೆ ತುಂಬಾ ಹೊಣೆಬಾರಿಯಾಗಿದೆ
ಮೊಟ್ಟೆ ದರ ಮತ್ತು ಖರ್ಚಿನ ಸಮಸ್ಯೆ: ಪ್ರತಿ ಮೊಟ್ಟೆಗೆ ಸರ್ಕಾರ ನಿಗದಿ ಮಾಡಿದ ದರ ರೂ.6. ಆದರೆ ಮಾರುಕಟ್ಟೆಯಲ್ಲಿ ಈ ಮೊಟ್ಟೆಗಳ ದರ 6.66 ರೂಪಾಯಿಯಾಗಿದೆ. ಹಳ್ಳಿಗಳಲ್ಲಿ ಈ ದರ ಇನ್ನೂ ಹೆಚ್ಚಾಗಿದ್ದು, ತಮ್ಮ ಜೇಬಿನಿಂದ ರೂ.1-1.50 ಪೈಸೆ ತಾವು ಖರ್ಚು ಮಾಡುತ್ತಿದ್ದಾರೆ. 30 ಮೊಟ್ಟೆಗಳ ಕೇಟ್‍ಗೆ ಸಗಟು ದರ ರೂ.200 ಇರುವುದರಿಂದ, ಮೊಟ್ಟೆ ಖರೀದಿಯ ಜವಾಬ್ದಾರಿ ಶಿಕ್ಷಕರಿಗೆ ಭಾರವಾಗಿದೆ ಎಂದು ಶಿಕ್ಷಕರು ಹೇಳತೊಡಗಿದ್ದಾರೆ.
ದಾಖಲೆಗಳ ಹೊರೆ: ಮೊಟ್ಟೆ ಖರೀದಿಯಿಂದ ವಿತರಣೆಯವರೆಗೂ 15ಕ್ಕೂ ಹೆಚ್ಚು ದಾಖಲೆಗಳನ್ನು ನಿರ್ವಹಿಸಬೇಕಾಗಿದ್ದು, ಇದರಿಂದ ಶಿಕ್ಷಕರ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ. ಗ್ರಾಮಾಂತರ ಶಾಲೆಗಳಲ್ಲಿನ ನೆಟ್‍ವರ್ಕ್ ಸಮಸ್ಯೆಯಿಂದ ಹಾಜರಾತಿ ನಮೂದಿಸುವಲ್ಲಿ ತೊಂದರೆ ಎದುರಾಗುತ್ತಿದ್ದು, ಅಧಿಕಾರಿ ಒತ್ತಡ ಶಿಕ್ಷಕರಿಗೆ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕತೊಡಗಿದ್ದಾರೆ.
ಶಿಕ್ಷಕರ ಬೇಡಿಕೆ: ಶಿಕ್ಷಕರ ಪ್ರಕಾರ, ಬಿಸಿಯೂಟ, ಮೊಟ್ಟೆ ವಿತರಣೆ, ನಲಿಕಲಿ, ಪ್ರತಿಭಾ ಕಾರಂಜಿ ಮುಂತಾದ ಯೋಜನೆಗಳ ನಿರ್ವಹಣೆ ಶಿಕ್ಷಣದ ಬದಲು ಅವರ ಕೆಲಸದ ಮುಖ್ಯ ಭಾಗವಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಗಮನಕೊಡುವುದು ಕಷ್ಟಸಾಧ್ಯವಾಗಿದೆ. ಇವರ ಪ್ರಕಾರ, ಮೊಟ್ಟೆ ವಿತರಣೆಯ ಹೊಣೆ ಬೇರೆಯವರಿಗೆ ವಹಿಸುವ ವ್ಯವಸ್ಥೆ ಅತೀ ಅವಶ್ಯಕವಾಗಿದೆ ಎಂಬ ಬೇಡಿಕೆಯ ಶಿಕ್ಷಕರ ಸಾಮೂಹಿಕ ಒತ್ತಾಯ ಕೇಳಿಬರುತ್ತಿದೆ.
ಸಮಸ್ಯೆ: ಚಳಿಗಾಲ ಮತ್ತು ಹವಾಮಾನ ವೈಪರೀತ್ಯದಿಂದ ಮೊಟ್ಟೆ ಉತ್ಪಾದನೆ ಕುಂಠಿತವಾಗಿದ್ದು, ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಸಮತೋಲನದಿಂದ ದರ ಏರಿಕೆಯಾಗುತ್ತಿದೆ. ಇದು ಯೋಜನೆಯ ಅಡಿಯಲ್ಲಿ ಮೊಟ್ಟೆ ಪೂರೈಕೆ ಕಷ್ಟವಾಗುವಂತೆ ಮಾಡುತ್ತಿದೆ.
ಶಿಕ್ಷಕರ ಸಂಕಟ: ಯೋಜನೆಯ ಸಮರ್ಪಕ ನಿರ್ವಹಣಾ ಕೊರತೆಯಿಂದ, ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಸಾಧ್ಯವಾಗದ ಸಂದರ್ಭದಲ್ಲಿ, ಪೆÇೀಷಕರು ಮತ್ತು ಸಂಘಟನೆಗಳಿಂದ ಶಿಕ್ಷಕರಿಗೆ ತೀವ್ರ ವಿರೋಧ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಸರಕಾರದ ಭಾವನೆ ಶ್ಲಾಘನೀಯವಾದರೂ, ಜಾರಿಗೆ ಇಂತಹ ಅಡಚಣೆಗಳು ಶಿಕ್ಷಕರಿಗೆ ದೊಡ್ಡ ಹೊರೆ ಎಂದು ಪ್ರತಿಪಾದಿಸಲಾಗಿದೆ.
Comments are closed.