ಆಳಂದ: ಗೋಳಾ ಗ್ರಾಮದಲ್ಲಿ ಜಂತುಹುಳ ನಿವಾರಣೆ ಕಾರ್ಯಕ್ರಮಮ ಎಸ್‍ಡಿಎಂಸಿ ಅಧ್ಯಕ್ಷ ಮಂಜುನಾಥ ಕೋರೆ ಉದ್ಘಾಟಿಸಿದರು.
ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ ಬಿ ಉಪಕೇಂದ್ರದಲ್ಲಿ ನರೋಣಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರೋಣಾ ಇವರ ಸಂಯುಕ್ತ ಆಶ್ರಯದಲ್ಲಿ “ರಾಷ್ಟ್ರೀಯ ಜಂತುಹುಳ ನಿವಾರಣೆ ಕಾರ್ಯಕ್ರಮ” ನಡೆಯಿತು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರು ಹಾಗೂ ಸಿಡಿಎಂಸಿ ಅಧ್ಯಕ್ಷ ಮಂಜುನಾಥ ಕೋರೆ, ಶಿವಾನಂದ ಸಿ.ಆರ್.ಸಿ ಮತ್ತು ಇತರ ಅತಿಥಿಗಳ ಸಾನ್ನಿಧ್ಯದಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ಹಂಚುವ ಮೂಲಕ ಉದ್ಘಾಟಿಸಲಾಯಿತು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳು ವಹಿಸಿದ್ದರು. ಸಿಎಚ್‍ಒ ಶಿವಾನಂದ್, ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶೈಲಜಾ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಶೋಕ್ ಪುಜಾರಿ, ಮತ್ತು ಆಶಾ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲು ಸಹಕರಿಸಿದರು.
ಈ ವೇಳೆ ವಿಜಯಲಕ್ಷ್ಮಿ, ಇಂದುಮತಿ, ಲಲಿತಾಬಾಯಿ, ವಿದ್ಯಾವತಿ, ಬಸವರಾಜೇಶ್ವರಿ, ಶ್ರೀದೇವಿ, ಜಯಶ್ರೀ ಕುಮಾರಿ, ಖ್ಯಾತಮ ಹಾಗೂ ಪ್ರೀತಿ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮುದಾಯ ಆರೋಗ್ಯ ಕೇಂದ್ರ ನರೋಣಾದ ಆಪ್ತ ಸಮಾಲೋಚಕ ಚಂದ್ರಕಾಂತ ಕೋರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments are closed.