ಆಳಂದ: ಕಡಗಂಚಿಯಲ್ಲಿ ನಡೆದ ಕೃಷಿಕ ಮಹಿಳಾ ದಿನಾಚರಣೆಯಲ್ಲಿ ರೈತ ಮಹಿಳೆ ಶುಷ್ಮಾ ಅವರನ್ನು ಸನ್ಮಾನಿಸಲಾಯಿತು.
ಆಳಂದ: ಕಾಯಕದ ಸಾಕಾರ ಮೂರ್ತಿ. ರೈತ ಮಹಿಳೆಯರು ಮನೆಯ ಕೆಲಸಗಳನ್ನು ನಿರ್ವಹಿಸುವುದರ ಜೊತೆಗೆ ಕೃಷಿ ಕಾಯಕವನ್ನು ಮಾಡುತ್ತಾರೆ. ಇತ್ತೀಚಿಗೆ ಕೌಶಲಗಳನ್ನು ಬೆಳೆಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಅವರ ತೋಟದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಮ್ಮಿಕೊಂಡ ‘ರಾಷ್ಟ್ರೀಯ ಕೃಷಿಕ ಮಹಿಳಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಮಹಿಳೆ ಶುಷ್ಮಾ ಕೆ.ಚೇಂಗಟಿ, ಮಹಿಳೆಯರು ತುಂಬಾ ಸಹನಶೀಲರು ಹಾಗೂ ಶ್ರಮಜೀವಿಗಳು. ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡುತ್ತಾರೆ. ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಬಾರದು. ನನಗೆ ಕೃಷಿ ಕಾಯಕ ಮಾಡುವುದು ಎಂದರೆ ತುಂಬಾ ಸಂತೋಷ ದೊರೆಯುತ್ತದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ವೃದ್ಧಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗುಡ್ಡಪ್ಪ ಪಿ.ಮೂಕ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಗತಿಪರ ರೈತ ಕಾಶಿನಾಥ ಚೇಂಗಟಿ, ಶಾಂತಾಬಾಯಿ ಗೆಬೇಲಿ, ಸಂಗೀತಾ ಡೋಣಿ, ಅಂದಾನಮ್ಮ ಚೇಂಗಟಿ, ಸುವರ್ಣಾ ಚೇಂಗಟಿ, ಸಾವನ್ ಎಸ್.ನಡಗೇರಿ, ರತ್ನಪ್ಪ ದಿಕ್ಸಂಗಿ, ಪಂಡಿತ ಧನ್ನಿ, ಧೂಳಪ್ಪ ಧನ್ನಿ, ಶರಣಬಪ್ಪ ಚೇಂಗಟಿ, ಕರಬಸಪ್ಪ ಭುಸನೂರ್, ವಿಜಕುಮಾರ ಖಜೂರಿ, ಹಣಮಂತ ಮಾಯಾಳ, ಶಿವಶಂಕರ ಚೇಂಗಟಿ, ರವಿ ಚೇಂಗಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Comments are closed.