ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ತಹಸೀಲದಾರ ಅಣ್ಣಾರಾಯ ಪಾಟೀಲ ಬಿಡುಗಡೆಗೊಳಿಸಿದರು. ಕಸಾಪ ಅಧ್ಯಕ್ಷ ಹಣಮಂತ ಶೇರಿ, ಸುಧಾಕರ ಖಾಂಡೇಕರ ಸೇರಿದಂತೆ ಇತರರು ಇದ್ದರು.
ಆಳಂದ ತಾಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಹಮ್ಮಿಕೊಂಡಿರುವ ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಆಡಳಿತದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಆಳಂದ ತಹಸೀಲದಾರ ಅಣ್ಣಾರಾಯ ಪಾಟೀಲ ಹೇಳಿದರು.
ಮಂಗಳವಾರ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ತಾಲೂಕಿನ ಸಾಹಿತ್ಯಿಕ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಮೂಲಕ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಯಶಸ್ವಿಗೊಳಿಸಲು ಉತ್ತಮ ವೇದಿಕೆ. ಸಮ್ಮೇಳನ ಯಶಸ್ವಿಯಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಸಮ್ಮೇಳನ ಬರಿ ಸಾಹಿತ್ಯದ ಜಾತ್ರೆಯಾಗದೆ ನಾಡಿನ ಕಲೆ, ಸಂಸ್ಕೃತಿ ಹಾಗೂ ತಾಲೂಕಿನ ಸಮಸ್ತ ವಿಚಾರಗಳನ್ನು ನಾಡಿಗೆ ತಿಳಿಸುವ ರೀತಿ ಸಮರ್ಥ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಪಕ್ಷಭೇದ ಮರೆತು ನಾಡು ನುಡಿಯ ತೇರನ್ನು ಎಳೆಯಲು ಕೈಜೋಡಿಸಬೇಕು ಎಂದರು.
ಕಸಾಪ ಅಧ್ಯಕ್ಷ ಹಣಮಂತ ಶೇರಿ ಮಾತನಾಡಿ, ಸಮ್ಮೇಳನವನ್ನು ಒಂದು ದಿನ ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಕನ್ನಡ ತಾಯಿ ತೇರನ್ನು ಸಂಭ್ರಮ, ಸಡಗರದಿಂದ ಎಳೆಯೋಣ ಎಂದು ಸಮ್ಮೇಳನದ ರೂಪ ರೇμÉಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಸುಧಾಕರ ಖಾಂಡೇಕರ್, ರವಿ ಪಟ್ಟಣಶೆಟ್ಟಿ, ಆಕಾಶ ಅಂಕಲಗಿ ಸೇರಿದಂತೆ ಇತರರು ಇದ್ದರು.
Comments are closed.