ಕಲಬುರಗಿ ವೃತ್ತ ಅರಣ್ಯಧಿಕಾರಿಗಳ ಸಭೆ: ಪರಿಭಾವಿತ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿ -ಸಚಿವ ಅರವಿಂದ ಲಿಂಬಾವಳಿ
ಕಲಬುರಗಿ ವೃತ್ತದ ಅರಣ್ಯ ವಲಯದಲ್ಲಿರುವ 44 ಸಾವಿರ ಹೆಕ್ಟೇರ್ ಪರಭಾವಿತ (ಡೀಮ್ಡ್) ಭೂಮಿಯನ್ನು ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸುವ ಯೋಜನೆ ರೂಪಿಸಿ ವರದಿ ಸಲ್ಲಿಸಿ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ಕಲಬುರಗಿ ವೃತ್ತದ ಅರಣ್ಯಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಬುರಗಿ, ಬೀದರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಪರಿಭಾವಿತ (ಡೀಮ್ಡ್) ಪ್ರದೇಶವಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆ ಹೆಚ್ಚು ಗಿಡ ಮರಗಳನ್ನು ನೇಡುವುದರ ಮೂಲಕ ಕಾಡು ಬೆಳಸಬೇಕು. ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವ ರೀತಿಯ ಮರಗಳನ್ನು ಪೆÇೀಷಿಸಿದರೆ ಉತ್ತಮ ಎಂದು ತಿಳಿದುಕೊಳ್ಳಿ. ಹಾಗೆ ಪ್ರವಾಸಿಗರನ್ನು ಸೆಳೆಯಲು ಕನಿಷ್ಠ 10 ರಿಂದ 15 ಪ್ರವಾಸಿ ತಾಣಗಳನ್ನು ನಿರ್ಮಾಣ ಮಾಡಿ ಎಂದು ಅವರು ಸಲಹೆ ನೀಡಿದರು.
ಚಂದ್ರಾಂಪಳ್ಳಿ ಪ್ರದೇಶದಲ್ಲಿನ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ 10 ಎಕರೆ ಜಾಗದಲ್ಲಿ ಅರಣ್ಯ ಇಲಾಖೆಯು ಟ್ರೀ ಪಾರ್ಕ್ ಮಾಡಲು ಅನುಮತಿ ನೀಡಿದ್ದು, ಇದಕ್ಕೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಿ ಪಾರ್ಕ್ ನಿರ್ಮಿಸಲಾಗುವುದು ಎಂದು ಸಚಿವ ಲಿಂಬಾವಳಿ ಅವರು ತಿಳಿಸಿದರು.
ಇದೆ ವೇಳೆ ಚಿಂಚೋಳಿ ತಾಲೂಕಿನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಚಂದ್ರಂಪಳ್ಳಿ ನಿಸರ್ಗ ಧಾಮದಲ್ಲಿರುವ ಗೋಟಂಗೋಟಿಗೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಲು ಕೋರಿದರು, ಇದಕ್ಕೆ ಸ್ಪಂದಿಸಿದ ಅವರು ರಸ್ತೆ ಸಂಪರ್ಕ ಹಾಗೂ ದೋಣಿ ಸಂಪರ್ಕ ಕಲ್ಪಿಸಲು ಸೂಚಿಸಿದರು.
ಇದಕ್ಕೆ ಉತ್ತರಿಸಿದ ಕಲಬುರಗಿಯ ಉಪ ಸಂರಕ್ಷಣಾಧಿಕಾರಿ ಎಂ.ಎಂ ವಾನತಿ ಅವರು, ಶೀಘ್ರದಲ್ಲಿ ಗೋಟಂಗೋಟಿ ದೇವಸ್ಥಾನಕ್ಕೆ ಸಂಪರ್ಕ ಸಾಧಿಸಲಾಗುವುದು ಎಂದು ಭರವಸೆ ನೀಡಿದರು.
ಕಾಡಿನ ಮಧ್ಯದಲ್ಲಿರುವ ಶೇರಿಬಿಕನಳ್ಳಿ ತಾಂಡವನ್ನು ಸ್ಥಳಾಂತರಿಸಲು ಕೋರಿದ ಗ್ರಾಮಸ್ಥರಿಗೆ ಇನ್ನು ಮೂರು ತಿಂಗಳಲ್ಲಿ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಿ ಜಮೀನು ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಐ.ಎಫ್.ಎಸ್) ವಿ. ಗೀತಾಂಜಲಿ, ಬೀದರನ ಉಪ ಅರಣ್ಯ ಸಂರಕ್ಷಣಾಧಿಕಾರಿ (ಐ.ಎಫ್.ಎಸ್) ಶಿವಶಂಕರ, ರಾಯಚೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ (ಎಸ್.ಎಫ್.ಎಸ್) ಎ. ಚಂದ್ರಣ್ಣ, ಯಾದಗಿರಿ ಎ.ಸಿ.ಎಫ್ ಪ್ರಭಾರಿ (ಡಿ.ಸಿ.ಎಫ್) ಎಂ.ಎಲ್. ಭಾವಿಕಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬಾಬುರಾವ ಪಾಟೀಲ್, ಮುನೀರ್ ಅಹ್ಮದ್, ವನ್ಯಜೀವಿ ವಲಯ ಅರಣ್ಯಾಧಿಕಾರಿ ಸಂಜೀವ ಕುಮಾರ ಹಾಗೂ ಡಿ.ಆರ್.ಎಫ್ ಮತ್ತು ಅರಣ್ಯ ರಕ್ಷಕ ಉಪ ವಲಯ ಅರಣ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
Comments are closed.