Shubhashaya News

ಜೆಸ್ಕಾಂ: ಅಧಿಕಾರಿಗಳು ಗ್ರಾಹಕರನ್ನು ಕುಟುಂಬದವರಂತೆ ಕಾಣಿ- ಶಾಸಕ ಗುತ್ತೇದಾರ

ಆಳಂದ ಜೆಸ್ಕಾಂ ಸಭೆಯಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿದರು. ವೀರಣ್ಣ ಮಂಗಾಣೆ, ಮಲ್ಲಿಕಾರ್ಜುನ ತಡಕಲ, ರಾಜಶ್ರೀ ಖಜೂರೆ, ವೀರಣ್ಣ ಹತ್ತರಕಿ, ಆನಂದರಾವ ಪಾಟೀಲ ಸೇರಿದಂತೆ ಇತರರು ಇದ್ದರು
ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಸ್ವಂತ ಕುಟುಂಬದಂತೆ ಕಾಣಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶನಿವಾರ ಆಳಂದ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆಸ್ಕಾಂ ಕಂಪನಿಯ ಅಧಿಕಾರಿಗಳ, ಸಿಬ್ಬಂದಿಗಳ ಹಾಗೂ ಗ್ರಾಹಕರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಧ್ಯ ಬೇಸಿಗೆ ಕಾಲ ಆರಂಭವಾಗುತ್ತಿದ್ದು ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಮಾಡಬೇಕು ಅದಕ್ಕಾಗಿ ಸಿಬ್ಬಂದಿಗಳು ದಿನದ 24 ಗಂಟೆಯೂ ಎಚ್ಚರಿಕೆಯಲ್ಲಿ ಇರಬೇಕು. ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರಿಗೆ ಪ್ರತಿದಿನ ಸಮರ್ಪಕವಾಗಿ ಕನಿಷ್ಟ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಇದರಿಂದ ನಾಡಿನ ಅನ್ನದಾತರ ಸಮಸ್ಯೆ ಪರಿಹರಿಸುವಲ್ಲಿ ಗಂಭೀರವಾದ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಶಾಖಾಧಿಕಾರಿಗಳಿಗೆ ಸೂಚಿಸಿದರು.


ಟಿಸಿ ಸುಟ್ಟರೆ ರೈತರಿಂದ ಹಣ ಪಡೆಯದೇ ಸಾಧ್ಯವಾದಷ್ಟು ಬೇಗ ಟಿಸಿ ಅಳವಡಿಸುವ ಕಾರ್ಯ ಮಾಡಬೇಕು ವಿನಾಕಾರಣ ನೆಪ ಹೇಳದೇ ಸಮಸ್ಯೆ ಪರಿಹರಿಸುವತ್ತ ಗಮನಹರಿಸಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಹಕರು, ರೈತರು ಕರೆ ಮಾಡಿದಾಗ ಶಾಖಾಧಿಕಾರಿಗಳು ಮತ್ತು ಲೈನಮೆನಗಳು ಕೂಡಲೇ ಕರೆ ಸ್ವೀಕರಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಅಲ್ಲದೇ ಆಳಂದ ಮತ್ತು ಕಡಗಂಚಿ ಉಪವಿಭಾಗಗಳ ನಡುವೆ ಒಂದು ಸಹಾಯವಾಣಿ ಸ್ಥಾಪಿಸಿ ತಕ್ಷಣ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಎನ್‍ಈಕೆಆರ್‍ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರೆ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಅಶೋಕ ಗುತ್ತೇದಾರ, ಶಿವಪುತ್ರಪ್ಪ ಪಾಟೀಲ ಮುನ್ನಹಳ್ಳಿ, ಇಇ ಸಂತೋಷ ಚವ್ಹಾಣ, ಆಳಂದ ಎಇಇ ಮಾಣಿಕರಾವ ಕುಲಕರ್ಣಿ, ಕಡಗಂಚಿ ಎಇಇ ಸುನೀಲಕುಮಾರ, ಆಳಂದ ಪಟ್ಟಣದ ಶಾಖಾಧಿಕಾರಿ ಸುಮೀತಕುಮಾರ, ಆಳಂದ ಗ್ರಾಮೀಣ ಶಾಖಾಧಿಕಾರಿ ಥಾಮಸ್ ಭಾವಿಕಟ್ಟಿ, ತಡಕಲ ಶಾಖಾಧಿಕಾರಿ ರಾಮರಾವ ತೋಳೆ, ಮಾದನ ಹಿಪ್ಪರ್ಗಾ ಶಾಖಾಧಿಕಾರಿ ಪರಮೇಶ್ವರ ಬಡಿಗೇರ, ನಿಂಬರ್ಗಾ ಶಾಖಾಧಿಕಾರಿ ಅಮೃತ ಅಲ್ಲಾಪುರೆ, ಖಜೂರಿ ಶಾಖಾಧಿಕಾರಿ ಜ್ಞಾನೇಶ್ವರ, ಸರಸಂಬಾ ಶಾಖಾಧಿಕಾರಿ ಮೈಸೂರ ಜಾಧವ, ರುದ್ರವಾಡಿ ಶಾಖಾಧಿಕಾರಿ ಪ್ರಭಾಕರ ಕಿರಿಯ ಪವರ್ ಮ್ಯಾನ್ ಶ್ರೀಶೈಲ ನಾಯ್ಕೋಡಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಇದ್ದರು.

 

Comments are closed.

Don`t copy text!