ಕುರುಬ ಸಮಾಜದ ಹಿರಿಯ ಮುಖಂಡ ಮಾಜಿ ಸಂಸದ ಕೆ ವೀರುಪಾಕ್ಷಪ್ಪ ಇಂದು ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ರಾಜ್ಯ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ ಸಮ್ಮುಖದಲ್ಲಿ ಕೆ ವೀರುಪಾಕ್ಷಪ್ಪ ಕೇಸರಿ ಪಾಳಯ ಸೇರಿದರು.
ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ವೀರುಪಾಕ್ಷಪ್ಪ ಅವರು ಕಾಂಗ್ರೇಸ್ ಸೇರಿದ್ದರು. ಈ ಹಿಂದೆ ಸಿಎಂ ಪುತ್ರ ವಿಜಯೇಂದ್ರ ವೀರುಪಾಕ್ಷಪ್ಪ ಮನೆಗೆ ಭೇಟಿ ನೀಡಿದ್ದು ಸಿಂಧನೂರಿನಲ್ಲಿ ಭಾರೀ ಗುಲ್ಲು ಎದ್ದಿತ್ತು. ಆ ಗುಲ್ಲಿನಂತೆ ಈಗ ಅವರು ಬಿಜೆಪಿ ಸೇರಿದ್ದಾರೆ. ಕುರುಬರ ಎಸ್‍ಟಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದರು.
Prev Post
Comments are closed.