ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಲಬುರಗಿ ರಂಗಾಯಣದಲ್ಲಿ ಮಾರ್ಚ್ 10ರವರೆಗೆ ಮಹಿಳಾ ನಾಟಕೋತ್ಸವ ಆಯೋಜಿಸಲಾಗಿದೆ. ರಂಗಾಸಕ್ತರು ಕಾರ್ಯಕ್ರಮಕ್ಕೆ ಆಗಮಿಸಿ ಪೆÇ್ರೀತ್ಸಾಹಿಸಬೇಕೆಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಶಿ ಮನವಿ ಮಾಡಿದ್ದಾರೆ.
ಮಾರ್ಚ್ 9ರಂದು ಬೆಳಿಗ್ಗೆ 11 ಗಂಟೆಗೆ ರಂಗಾಯಣದಲ್ಲಿ ಕೊಡಗು ಜಿಲ್ಲೆಯ ಹಿರಿಯ ರಂಗಕರ್ಮಿಗಳಾದ ಅಡ್ಡಂಡ ಅನಿತಾ ಕಾರ್ಯಪ್ಪ ಅವರಿಂದÀ ರಂಗಾಂತರಾಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಸಂಜೆ 6.30 ಗಂಟೆಗೆ ಧಾರವಾಡದ ಆಟಮಾಟ ತಂಡದ ಮಹಾದೇವ ರಚಿಸಿದ ಮತ್ತು ಗಾಯತ್ರಿ ಹೆಗ್ಗೋಡು ನಿರ್ದೇಶಿಸಿದ ಅಮ್ರಪಾಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 10ರಂದು ಸಂಜೆ 6.30 ಗಂಟೆಗೆ ಹಿರಿಯ ನಟಿ ಮಂಜುಳಾ ಬದಾಮಿ ಅಭಿನಯದ ಮತ್ತು ವೈ.ಡಿ.ಬದಾಮಿ ನಿರ್ದೇಶನದ ವಸುಂಧರೆ ಎಂಬ ಏಕವ್ಯಕ್ತಿ ರಂಗಪ್ರಯೋಗ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಉಪಸ್ಥಿತರಿರುವರು.
Comments are closed.