Shubhashaya News

ಮಾರ್ಚ್ ಮಾಹೆ: ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ

2021ರ ಮಾರ್ಚ್ ಮಾಹೆಗೆ ಕಲಬುರಗಿ ಜಿಲ್ಲೆಯ ಎ.ಎ.ವೈ./ ಅಂತ್ಯೋದಯ ಅನ್ನ, ಬಿ.ಪಿ.ಎಲ್./ಆದ್ಯತಾ ಹಾಗೂ ಎಪಿಎಲ್/ ಆದ್ಯತೇತರ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಜಿಲ್ಲೆಯ 63,536 ಎ.ಎ.ವೈ. ಪಡಿತರ ಚೀಟಿಗಳ 2,64,876 ಸದಸ್ಯರಿಗೆ ಮತ್ತು 4,92,657 ಪಿ.ಎಚ್.ಎಚ್. ಪಡಿತರ ಚೀಟಿಗಳ 16,66,102 ಸದಸ್ಯರಿಗೆ ಹಾಗೂ 17,856 ಎಪಿಎಲ್ ಕಾರ್ಡುದಾರರಿಗೆ ಕೆಳಗಿನಂತೆ ಪಡಿತರವನ್ನು ವಿತರಿಸಲಾಗುತ್ತದೆ.
ಎ.ಎ.ವೈ./ ಅಂತ್ಯೋದಯ ಅನ್ನ ಪಡಿತರ ಕಾರ್ಡುದಾರ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ. ಉಚಿತವಾಗಿ ನೀಡಲಾಗುತ್ತದೆ.
ಬಿ.ಪಿ.ಎಲ್./ಆದ್ಯತಾ ಕಾರ್ಡಿನ ಪ್ರತಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5. ಕೆ.ಜಿ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುತ್ತದೆ.
ಎ.ಪಿ.ಎಲ್./ಆದ್ಯತೇತರ (Willingness) ಪಡಿತರ ಚೀಟಿದಾರರಿಗೆ ಏಕ ಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ ಹಾಗೂ ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ. ಗೆ 15 ರೂ ದರದಲ್ಲಿ ನೀಡಲಾಗುತ್ತದೆ.
ಪೋರ್ಟೆಬಿಲಿಟಿ (Portability) ಅಂತರರಾಜ್ಯ /ಅಂತರ್ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Comments are closed.

Don`t copy text!