Shubhashaya News

ನ್ಯಾಯಾಂಗ ವ್ಯವಸ್ಥೆಯ ಸುಧಾರಣಾ ಕ್ರಮಗಳು

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಜಗತ್ತಿನಲ್ಲಿ ತನ್ನದೇಯಾದ ಐತಿಹಾಸಿಕ ಪರಂಪರೆಯಿದೆ. ರಾಮಾಯಣ, ಮಹಾಭಾರತ ಕಾಲದಲ್ಲಿಯು ಭಾರತೀಯ ನ್ಯಾಯ ಸಂಹಿತೆ ಪ್ರಮುಖವಾಗಿತ್ತು. ವಿಚಾರಣೆಗಳು ತಳಮಟ್ಟದಿಂದ ಆರಂಭವಾದರೂ ಮೇಲ್ಮಟ್ಟದವರೆಗೆ ಹೋಗಲು ಆಗಲೂ ಅವಕಾಶವಿತ್ತು ಈಗಲೂ ಅವಕಾಶವಿದೆ. ಕಾಲ ಕಾಲಕ್ಕೆ ನ್ಯಾಯಾಂಗ ವ್ಯವಸ್ಥೆಯೂ ತನ್ನ ಸ್ವರೂಪದಲ್ಲಿ ಬದಲಾವಣೆಗಳನ್ನು ಕಂಡಿದೆ. ಮಾರ್ಪಾಡುಗಳನ್ನು ಮಾಡಿಕೊಂಡಿದೆ.
ಆದರೂ ಜನಸಾಮಾನ್ಯರಿಗೆ ನ್ಯಾಯ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ. ಜನಸಾಮಾನ್ಯರಲ್ಲಿ ಒಂದು ಸಾಮಾನ್ಯ ಅನಿಸಿಕೆ ಬಂದಿದೆ. ಉಳ್ಳವರು ಪ್ರಕರಣಗಳು ಬಹು ಬೇಗ ವಿಚಾರಣೆಗೆ ಬರುತ್ತವೆ ಆದರೆ ಬಡವರ ಪ್ರಕರಣದ ವಿಚಾರಣೆಗಳು ಹಲವಾರು ವರ್ಷಗಳಾದರೂ ವಿಚಾರಣೆಗೆ ಬರುವುದೇ ಇಲ್ಲ ಭಾವನೆ ಬಂದಿದೆ. ಅದಕ್ಕೆ ಉದಾಹರಣೆಯಾಗಿ ಮಧ್ಯರಾತ್ರಿ 12 ಗಂಟೆಗೆ ಸುಪ್ರೀಂ ಕೋರ್ಟ ಬಾಗಿಲು ತೆರೆದಿದ್ದು ಜನ ಕಣ್ಣಾರೆ ಕಂಡಿದ್ದಾರೆ.


ವಿಚಾರಣೆಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಕಾಲದಲ್ಲಿ ನ್ಯಾಯಾದಾನ ಪ್ರಕ್ರಿಯೆ ತಡವಾಗಿ ಆಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಸಾಕ್ಷಿ, ಆಧಾರಗಳ ಕೊರತೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕೆಳ ನ್ಯಾಯಾಲಯವು ನೀಡಿರುವ ತೀರ್ಪನ್ನು ಕೆಲವೊಂದು ಸಲ ಮೇಲ್ಮಟ್ಟದ ನ್ಯಾಯಾಲಯಗಳು ಅನೂರ್ಜಿತಗೊಳಿಸಿದ ಉದಾಹರಣೆಗಳಿವೆ. ಇಂತಹ ಪ್ರಕರಣಗಳಲ್ಲಿ ತಪ್ಪು ತೀರ್ಪು ನೀಡಿರುವ ನ್ಯಾಯಾಲಯಗಳಿಗೆ ಶಿಕ್ಷೆ ನೀಡಲಾಗುತ್ತಿದೆಯೇ? ಇದರ ಕುರಿತು ಗಂಭೀರವಾಗಿ ಆಲೋಚಿಸಬೇಕಾಗಿದೆ.
ಮುಂದುವರೆದು ಇನ್ನೂ ಹಲವಾರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ಆಪಾದಿತರನ್ನು ಅಥವಾ ಪ್ರಕರಣಗಳನ್ನು ಕೈ ಬಿಟ್ಟಿರುವ ಉದಾಹರಣೆಗಳಿವೆ. ಒಂದು ಘಟನೆ ಜರುಗಿದೆ ಎಂದ ಮೇಲೆ ಅಲ್ಲಿ ಏನೋ ಘಟಿಸಿದೇ ಎಂದರ್ಥ. ಆದರೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕದಿರುವುದು ವಿಚಾರಣಾಧಿಕಾರಿಗಳ ತಪ್ಪಲ್ಲವೇ? ಘಟನೆ ನಡೆದಿದೆ ಎಂದ ಮೇಲೆ ಯಾರಾದರೂ ಆರೋಪಿಗಳು ಇರಬೇಕಲವ್ವೇ?. ಸಾಕ್ಷಾಧಾರಗಳು ದೊರಕಿಲ್ಲ ಎಂದ ಮಾತ್ರಕ್ಕೆ ಈಡೀ ಪ್ರಕರಣವನ್ನು ಬರ್ಖಾಸ್ತುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ?. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಕ್ಕೆ ಮುಂದಾಗಬಹುದಲ್ವೇ?.

Comments are closed.

Don`t copy text!