ಆಳಂದ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟಗಳಿಗೆ ತಡರಾತ್ರಿ ಕಲಬುರಗಿ ಜಿಲ್ಲಾಧಿಕಾರಿ ವಿಜಯಾ ವಾಸಿರೆಡ್ಡಿ ಜ್ಯೋತ್ಸ್ನಾ ಭೇಟಿ ನೀಡಿದರು.
ಆಳಂದ ತಾಲೂಕಿನ ಖಜೂರಿ ಮತ್ತು ಹಿರೋಳಿ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಸುಮಾರು ಅರ್ಧ ಗಂಟೆ ಕಾಲ ಅಲ್ಲೇ ಕಾದು ತಾವೇ ಸ್ವತ: ವಾಹನಗಳನ್ನು ಪರೀಶೀಲಿಸಿದರು.
ಮಹಾರಾಷ್ಟ್ರದಿಂದ ಬರುವ ಮತ್ತು ಹೋಗುವ ಪ್ರತಿಯೊಂದು ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಅಲ್ಲದೇ ಕೋವಿಡ್ ನೆಗೆಟಿವ್ ವರದಿ ಹೊಂದಿರುವವರನ್ನು ಮಾತ್ರ ರಾಜ್ಯದಲ್ಲಿ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕರ್ತವ್ಯದ ಮೇಲಿದ್ದ ಸಿಬ್ಬಂದಿಗಳಿಗೆ ಸೂಚಿಸಿದರು.
Prev Post
Comments are closed.