Shubhashaya News

ಜನಸಾಮಾನ್ಯರ ಪರಿಷತ್ ಮಾಡುವ ಮಹಾದಾಸೆ- ನಾಡೋಜ ಡಾ. ಮಹೇಶ ಜೋಷಿ

ತಾಲೂಕಿಗೊಂದು ಕನ್ನಡ ಭವನ, 16 ಅಂಶಗಳ ಕಾರ್ಯಕ್ರಮ

ಆಳಂದ: ಎಸ್‍ಆರ್‍ಜಿ ಫೌಂಡೇಶನನ ಶಾಲಾ ಕಾಲೇಜುಗಳಲ್ಲಿ ನಾಡೋಜ ಡಾ. ಮಹೇಶ ಜೋಷಿ ಮತಯಾಚನೆ ಮಾಡಿದರು. ಅರಳಿ ನಾಗರಾಜ, ಮಲ್ಲಿನಾಥ ಯಲಶೆಟ್ಟಿ, ಕಾಶಿನಾಥ ಬಿರಾದಾರ ಸೇರಿದಂತೆ ಇತರರು ಇದ್ದರು.

ಕನ್ನಡ ಸಾಹಿತ್ಯ ಪರಿಷತನ್ನು ಜನಸಾಮಾನ್ಯರ ಪರಿಷತ್ ಆಗಿ ಮಾಡಿ ಅದರ ಮೂಲಕ ಈ ನಾಡಿನ ಸಾಹಿತ್ಯ ಸಂಸ್ಕøತಿಯನ್ನು ವೃದ್ಧಿಸುವ ಕೆಲಸ ಮಾಡುವ ಮಹಾದಾಸೆ ಹೊಂದಿದ್ದೇನೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಡೋಜ ಡಾ, ಮಹೇಶ ಜೋಷಿ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಪರಿಷತ್ ಸದಸ್ಯರ ಸಂಖ್ಯೆ ಹೆಚ್ಚಿಸಲು ಲಭ್ಯವಿರುವ ತಂತ್ರಜ್ಞಾನ ಬಳಸಿ ಅತ್ಯಂತ ಸರಳ ವ್ಯವಸ್ಥೆ ಜಾರಿಗೆ ತರಲಾಗುವುದು. 16 ಅಂಶಗಳ ಕಾರ್ಯಕ್ರಮಗಳ ಮೂಲಕ ಚುನಾವಣೆ ಎದುರಿಸಲು ಬಯಸಿದ್ದು ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಸಾಹಿತ್ಯ ಪರಿಷತ್ ಮತದಾರರು ಈ ಬಾರಿ ತಮ್ಮನ್ನು ಗೆಲ್ಲಿಸುವುದರ ಮೂಲಕ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡಲು ಅನುವು ಮಾಡಿ ಕೊಡಬೇಕು ಎಂದು ವಿನಂತಿಸಿದರು.
ತಾಲೂಕಿಗೊಂದು ಕನ್ನಡ ಭವನ ನಿರ್ಮಿಸಿ ಕನ್ನಡ ಸಾಹಿತ್ಯ, ಸಂಸ್ಕøತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಕನ್ನಡತನದ ಅಸ್ಮಿತೆಯನ್ನು ಕಾಪಾಡಿಕೊಂಡು ಹೋಗಲಾಗುವುದು ಎಂದು ಮನವಿ ಮಾಡಿದರು.


ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ಮಹೇಶ ಜೋಷಿ ಪ್ರಾಮಾಣಿಕರಾಗಿದ್ದು ನಾಡು ನುಡಿಯ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ ಅಲ್ಲದೇ ಸಾಹಿತ್ಯ ಪರಿಷತನ ಸಾರಥಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ ಹೀಗಾಗಿ ನಾನು ಕೂಡ ಅವರ ಬೆಂಬಲಕ್ಕೆ ನಿಂತು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದೇನೆ ಹೀಗಾಗಿ ಎಲ್ಲರೂ ಮಹೇಶ ಜೋಷಿಯವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಬಿಸಾಬ ಕುಷ್ಟಗಿ, ಮಲ್ಲಿನಾಥ ಯಲಶೆಟ್ಟಿ, ಕಾಶಿನಾಥ ಬಿರಾದಾರ, ಡಾ. ಅಪ್ಪಾಸಾಬ ಬಿರಾದಾರ, ಅಶೋಕ ರೆಡ್ಡಿ ಸೇರಿದಂತೆ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಸ್‍ಆರ್‍ಜಿ ಫೌಂಡೇಶನನ ಶಾಲಾ ಕಾಲೇಜುಗಳಲ್ಲಿ ನಾಡೋಜ ಡಾ. ಮಹೇಶ ಜೋಷಿ ಮತಯಾಚನೆ ಮಾಡಿದರು. ಅರಳಿ ನಾಗರಾಜ, ಮಲ್ಲಿನಾಥ ಯಲಶೆಟ್ಟಿ, ಕಾಶಿನಾಥ ಬಿರಾದಾರ ಸೇರಿದಂತೆ ಇತರರು ಇದ್ದರು.

Comments are closed.

Don`t copy text!