Shubhashaya News

ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ಥಿ ಗೊಳಿಸಿದ ಸದಸ್ಯರ ಪುತ್ರ.

ಸುರಪುರ: ನಗರಸಭಾ ವಾರ್ಡ್ ನಂಬರ್ 14ರ ಸದಸ್ಯೆ ಕಾಶಿಬಾಯಿ ಕರಿಗುಡ್ಡ ಅವರ ಪುತ್ರನಾದ ನರಸಪ್ಪ

ಸುರಪುರ ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 14 ರಲ್ಲಿ ಸುಮಾರು ದಿನಗಳಿಂದ ಕುಡಿಯುವ ನೀರಿನ ಬೋರ್ವೆಲ್ ಕೆಟ್ಟು ಪೈಪ್ ಲೈನ್ ಒಡೆದುಹೋಗಿತ್ತು.

ಇದನ್ನು ಗಮನಿಸಿದ ವಾರ್ಡ್ ನಂಬರ್ 14ರ ಸದಸ್ಯೆ ಕಾಶಿಬಾಯಿ ಕರಿಗುಡ್ಡ ಅವರ ಪುತ್ರನಾದ ನರಸಪ್ಪ ಇಂದು ಸ್ವತಹ ತಾವೇ ಪೈಪ್ ಲೈನ್ ದುರಸ್ತಿ ಮಾಡುವ ಮೂಲಕ ಇತರ ಸದಸ್ಯರಿಗೆ ಮಾದರಿಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನಮ್ಮ ವಾರ್ಡಿನ ಜನರು ಸುಮಾರು ದಿನಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು ಅದನ್ನು ಗಮನದಲ್ಲಿಟ್ಟುಕೊಂಡು ಇವತ್ತು ನಾನು ದುರಸ್ತಿಗೊಳಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.

Comments are closed.

Don`t copy text!