Shubhashaya News

ನಾಲ್ಕು ದಿನ ಬ್ಯಾಂಕ್ ಸೇವೆಗಳಿರುವುದಿಲ್ಲ….

ಬ್ಯಾಂಕ್ ಒಕ್ಕೂಟವೂ ಮಾರ್ಚ್ 15 ಮತ್ತು 16 ರಂದು ಮುಷ್ಕರಕ್ಕೆ ಕರೆ ನೀಡಿದೆ. ಜೊತೆಗೆ ಮಾರ್ಚ್ 13 ಎರಡನೇ ಶನಿವಾರವಾಗಿದೆ. ಮಾರ್ಚ್ 14 ಭಾನುವಾರ. ಹಾಗಾಗಿ ಈ ನಾಲ್ಕು ದಿನ ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಲಭ್ಯ ಇರುವುದಿಲ್ಲ

ಆಗಾಗ್ಗೆ ಬಂದ್ ಗಳನ್ನು ಎದುರಿಸುತ್ತಾ ಹೈರಾಣಾಗಿರುವ ಜನತೆಗೆ ಇದೀಗ ಮತ್ತೊಂದು ಮುಷ್ಕರದ ಬಿಸಿ ತಟ್ಟಲಿದೆ. ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ 9 ಸಂಘಟನೆಗಳ ಒಕ್ಕೂಟವು (ಯು.ಎಫ್.ಬಿ‌.ಯು) ಮಾರ್ಚ್ 15ರಿಂದ ಎರಡು ದಿನಗಳ ಮು’ಷ್ಕರ ನಡೆಸುವುದಾಗಿ ಘೋಷಿಸಿದೆ. ಎರಡು ದಿನ ಮುಷ್ಕರ ಹಾಗೂ ಮತ್ತೆರಡು ದಿನ ರಜೆ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಬ್ಯಾಂಕ್ ಒಕ್ಕೂಟವೂ ಮಾರ್ಚ್ 15 ಮತ್ತು 16 ರಂದು ಮುಷ್ಕರಕ್ಕೆ ಕರೆ ನೀಡಿದೆ. ಜೊತೆಗೆ ಮಾರ್ಚ್ 13 ಎರಡನೇ ಶನಿವಾರವಾಗಿದೆ. ಮಾರ್ಚ್ 14 ಭಾನುವಾರ. ಹಾಗಾಗಿ ಈ ನಾಲ್ಕು ದಿನ ಗ್ರಾಹಕರಿಗೆ ಬ್ಯಾಂಕ್ ಸೇವೆಗಳು ಲಭ್ಯ ಇರುವುದಿಲ್ಲ. 2021-22ರ ಹೊಸ ಹಣಕಾಸು ವರ್ಷವು ಮಾರ್ಚ್ ಆರಂಭದಿಂದ ಪ್ರಾರಂಭವಾಗುತ್ತದೆ. ಈ ಸನ್ನಿವೇಶದಲ್ಲಿ, ರಜಾ ದಿನಗಳ ಕಾರಣದಿಂದ ಬ್ಯಾಂಕಿನ ಶಾಖೆಗಳು ಮುಚ್ಚಲ್ಪಟ್ಟರೂ, ನೀವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಅನೇಕ ಕೆಲಸಗಳನ್ನು ನಿರ್ವಹಿಸಬಹುದು.
ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳಲ್ಲಿ ವ್ಯತ್ಯಾಸ ವಾಗಬಹುದು ಎಂದು ಆರ್.ಬಿ.ಐ ಹೇಳಿದೆ. ಆದ್ದರಿಂದ, ಎಲ್ಲಾ ಗ್ರಾಹಕರು ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿಂಗ್ ಗೆ ಸಂಬಂಧಿಸಿದ ತಮ್ಮ ಕೆಲಸವನ್ನು ಯೋಜಿಸಬೇಕಾಗಿದೆ. ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕ್ ಸೇವೆಗಳಲ್ಲಿಯೂ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟ ಹೇಳಿದೆ. ಜನರು ಬ್ಯಾಂಕ್ ಕೆಲಸಗಳಿದ್ದರೆ ಮುಂದಿನವಾರವೇ ಮುಗಿಸಿಕೊಳ್ಳುವುದು ಉತ್ತಮ.

Comments are closed.

Don`t copy text!