ಸಾಹಿತ್ಯ ಪರಿಷತ್ತಿನ ಭರವಸೆ ವಿಜಯಕುಮಾರ ತೇಗಲತಿಪ್ಪಿ
ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಯ್ಕೆಯಾಗಬೇಕು ಎನ್ನುವುದು ಬಹಳ ಜನರ ಆಶಯವಾಗಿದೆ.
ಸಾಹಿತ್ಯ ಪರಿಷತ್ತಿನ ಭರವಸೆ ವಿಜಯಕುಮಾರ ತೇಗಲತಿಪ್ಪಿ
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆಯ ದಿನಾಂಕ ನಿಗದಿಯಾಗಿದೆ. ಸ್ಪರ್ಧೆ ಬಯಸಿ ಹಲವರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಇನ್ನೂ ಕೆಲವರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಸದಾಕಾಲ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ವಿಜಯಕುಮಾರ ತೇಗಲತಿಪ್ಪಿ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಮಾತುಗಳು ಸಾಹಿತ್ಯಕ ವಲಯದಲ್ಲಿ ಗಂಭೀರವಾಗಿ ಕೇಳಿ ಬರುತ್ತಲಿವೆ.
ಕಲ್ಯಾಣ ಕರ್ನಾಟಕದ ಕಲಬುರಗಿ ನೆಲದಲ್ಲಿ ಕಳೆದ 2 ದಶಕಗಳಿಂದ ನಿರಂತರವಾಗಿ ಸಾಹಿತ್ಯಕ, ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ತೇಗಲತಿಪ್ಪಿಯವರು ಒಂದು ರೀತಿಯಿಂದ ಕಲಬುರಗಿಯ ಸಾಂಸ್ಕøತಿಕ ರಾಯಭಾರಿ ಎಂದರೂ ತಪ್ಪಾಗಲಾರದು. ಪ್ರತಿಭೆಯಿದ್ದರೂ ಸೂಕ್ತ ಅವಕಾಶಗಳಿಲ್ಲದೇ ವಂಚಿತರಾಗಿದ್ದ ಈ ನೆಲದ ಹಲವಾರು ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ವಿಶ್ವಜ್ಯೋತಿ ಪ್ರತಿಷ್ಠಾನ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಸಮಾಜದಲ್ಲಿಯೂ ಎಲ್ಲರೊಂದಿಗೆ ಉತ್ತಮ ಸಂಬಂಧ ಬೆಳಸಿಕೊಂಡಿರುವ ವಿಜಯಕುಮಾರ ತೇಗಲತಿಪ್ಪಿಯವರು ಸರ್ವ ಜಾತಿ, ಧರ್ಮಗಳನ್ನು ಗೌರವ ಆದರದಿಂದ ಕಾಣುತ್ತಿದ್ದಾರೆ. ಈ ಬಾರಿ ಸಹಜವಾಗಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎನ್ನುತ್ತಾರೆ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು.
ಈ ಭಾಗದ ಯಾವುದೇ ಕ್ಷೇತ್ರದ ವ್ಯಕ್ತಿಗೆ ಪ್ರಶಸ್ತಿ, ಪುರಸ್ಕಾರಗಳು ದೊರೆತಾಗ ಮೊದಲಿಗೆ ಹೋಗಿ ಸನ್ಮಾನ ಮಾಡುವವರೇ ವಿಜಯಕುಮಾರ ತೇಗಲತಿಪ್ಪಿಯವರು. ಸರಳರಲ್ಲಿ ಸರಳ ವ್ಯಕ್ತಿತ್ವ ಹೊಂದಿದ ಇವರು ಕಲಬುರಗಿಯಲ್ಲಿ ಪಾದರಸದಂತೆ ಓಡಾಡಿ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಕೊರೋನಾ ಸಂದರ್ಭದಲ್ಲಿಯೂ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಉತ್ತಮ ಸಂಘಟಕರಂತೆ ಉತ್ತಮ ಸ್ನೇಜ ಜೀವಿಯಾಗಿಯೂ ಆಗಿರುವ ಇವರು ಸಾಹಿತ್ಯ ಪರಿಷತ್ತಿನ ಸಾರಥಿಯಾದರೆ ಅದಕ್ಕೆ ಜೀವಕಳೆ ಬರುವುದರಲ್ಲಿ ಅನುಮಾನವೇ ಇಲ್ಲ.
ಸಮಾಜಕ್ಕಾಗಿ ಶ್ರಮಿಸುವ ಕಾಯಕಜೀವಿಗಳನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುವ ಗುಣ ಉಳ್ಳ ಇವರಿಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿರಿ ದೊರತರೆ ಅದಕ್ಕೂ ಒಂದು ಘನತೆ ದೊರೆತಂತಾಗುತ್ತದೆ. ಮುಂಜಾನೆಯಿಂದ ರಾತ್ರಿತನಕ ಕೇವಲ ಕಾರ್ಯಕ್ರಮಗಳ ಬಗ್ಗೆಯೇ ಯೋಚಿಸುವ ಇವರಿಗೆ ಕಾರ್ಯಕ್ರಮ ಸಂಘಟಿಸಲು ದಿನಕ್ಕಿರುವ 24 ಗಂಟೆ ಸಾಲದು. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥಿಯಾಗಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಯ್ಕೆಯಾಗಬೇಕು ಎನ್ನುವುದು ಬಹಳ ಜನರ ಆಶಯವಾಗಿದೆ.
Comments are closed.