Shubhashaya News

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಂಪೆನಿ ಪ್ರಯತ್ನ: ಹಳ್ಳೆ

ಓರಿಯಂಟ್ ಕಂಪನಿಯಿಂದ ಶಾಲೆಗಳಿಗೆ ಅಡುಗೆ ಸಾಮಗ್ರಿಗಳು, ಆಟಿಕೆ ಸಾಮಾನುಗಳು ವಿತರಣೆ

ಚಿತ್ತಾಪುರ: ತಾಲೂಕಿನ ಇಟಗಾ ಹತ್ತಿರದ ಓರಿಯಂಟ್ ಸಿಮೆಂಟ್ ಕಂಪನಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಸಾಮಾಗ್ರಿಗಳು, ಆಟಿಕೆ ಸಾಮಾನುಗಳನ್ನು ತಹಶೀಲ್ದಾರ್ ಉಮಾಕಾಂತ ಹಳ್ಳೆ ವಿತರಿಸಿದರು.

ಓರಿಯಂಟ್ ಕಂಪನಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕಂಪನಿಯ ಆಡಳಿತ ಮಂಡಳಿ ಸತತ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ತಾಲೂಕಿನ ಇಟಗಾ ಹತ್ತಿರದ ಓರಿಯಂಟ್ ಸಿಮೆಂಟ್ ಕಂಪನಿಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಂಪನಿಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಸಾಮಗ್ರಿಗಳು, ಆಟಿಕೆ ಸಾಮಾನುಗಳು ವಿತರಿಸಿ ಮಾತನಾಡಿದ ಅವರು, ಕರೋನಾ ವೈರಸ್ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ ಕಂಪನಿಯು ಅನೇಕ ಸಹಾಯ ಸಹಕಾರ ನೀಡಿದೆ ಎಂದರು.
ಕಂಪನಿ ಪ್ರಧಾನ ವ್ಯವಸ್ಥಾಪಕ ಶಿವಾನಂದ ಪಾಟೀಲ್ ಮಾತನಾಡಿ, ಇಟಗಾ, ದಿಗ್ಗಾಂವ, ಮೊಗಲಾ, ಮೊಗಲಾ ತಾಂಡಾ, ಸ್ಟೇಷನ್ ತಾಂಡಾಗಳ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪಾತ್ರೆಗಳು, ಪ್ರೇಟ್, ಕುಕ್ಕರ್ ಸೇರಿದಂತೆ ಅನೇಕ ಅಡುಗೆ ಸಾಮಾಗ್ರಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸೈಕಲ್ ಸೇರಿದಂತೆ ಅನೇಕ ಆಟಿಕೆ ಸಾಮಾನುಗಳು ವಿತರಿಸಲಾಗಿದೆ. ಕಂಪನಿ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳು, ತಾಂಡಾಗಳಿಗೆ ಮೂಲಸೌಲಭ್ಯಗಳು ಒದಗಿಸುವ ಜತೆಗೆ ಕಂಪ್ಯೂಟರ್, ಫ್ಯಾಶನ್ ಡಿಸೈನರ್, ಹೊಲಿಗೆಯಂತಹ ತರಬೇತಿಗಳು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಅಬಕಾಸ್ ತರಬೇತಿ ನೀಡಿರುವುದರಿಂದ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಗಳು ಸಮರ್ಪಕವಾಗಿ ಎದುರಿಸುತ್ತಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ಓರಿಯಂಟ್ ಸಿಮೆಂಟ್ ಕಂಪೆನಿ ವತಿಯಿಂದ ಹಮ್ಮಿಕೊಳ್ಳುವ ಕಾರ್ಯ ಚಟುವಟಿಕೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಶಿಕ್ಷಕರಾದ ವೀರಸಂಗಪ್ಪ ಸುಲೇಗಾಂವ, ಮಹೇಶಕುಮಾರ ಬಾವಿಕಟ್ಟಿ ಮಾತನಾಡಿದರು.
ಕೆಎಎಸ್ ಪ್ರೋಬೆಶನರಿ ತಹಶೀಲ್ದಾರ್ ಡಾ. ಶೃತಿ ಎಂ.ಕೆ, ಇಟಗಾ, ಮೊಗಲಾ, ದಿಗ್ಗಾಂವ ಮತ್ತು ಮೊಗಲಾ ತಾಂಡಾ, ಸ್ಟೇಷನ್ ತಾಂಡಾ ಗ್ರಾಮಸ್ಥರು ಹಾಗೂ ಶಿಕ್ಷಕ, ಶಿಕ್ಷಕಿಯರು ಇದ್ದರು.
ಆಕೃತಿ ಟ್ರಸ್ಟ್ ಮುಖ್ಯಸ್ಥೆ ಮಂಜುಳಾ ಭಾನುಪ್ರಕಾಶ ನಿರೂಪಿಸಿ, ವಂದಿಸಿದರು.

Comments are closed.

Don`t copy text!