ಚಿತ್ತಾಪುರ: ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಅನಧಿಕೃತವಾಗಿ ನಡೆಯುತ್ತಿರುವ ವಾಟರ್ ಪ್ಲ್ಯಾಂಟ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುಲಬರ್ಗಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯನುಪ್ಯ್ಚಾಕರರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಅಕ್ರಮವಾಗಿ, ಅನಾಧಿಕೃತವಾಗಿ ನಡೆಯುತ್ತಿರುವ ವಾಟರ್ ಪ್ಲ್ಯಾಂಟ್‍ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುಲಬರ್ಗಾ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯನುಪ್ಯಾಕ್ಚರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಅಕ್ರಮವಾಗಿ ನಡೆಯುತ್ತಿರುವ ಶುದ್ಧ ನೀರು ತಯಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ, ಜೇಸ್ಕಾಂ, ಚಿತ್ತಾಪುರ ತಹಶೀಲ್ದಾರ್ ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಸಹ ಇಲ್ಲಿವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮುಕ್ತಾದೀರ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರಿಂದಲೇ ಎಲ್ಲಂದರಲ್ಲಿ ಅಕ್ರಮವಾಗಿ ಶುದ್ಧ ನೀರಿನ ಘಟಕಗಳು ನಡೆಯುತ್ತಿವೆ ಅವರಿಗೆ ಯಾರ ಭಯವಿಲ್ಲದಂತಾಗಿದೆ. ಕನಿಷ್ಠ ಪಕ್ಷ ಜನರ ಆರೋಗ್ಯ ದೃಷ್ಠಿಯಿಂದಾದರೂ ಕೂಡಲೇ ಎಚ್ಚೆತ್ತುಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಸರ್ಕಾರದಿಂದ ಐಎಸ್‍ಐ ಮತ್ತು ಎಫ್‍ಎಸ್‍ಎಸ್‍ಎಐ ವತಿಯಿಂದ ಮಾನ್ಯತೆ ಪಡೆದು ನಿಯಮ ಬದ್ಧವಾಗಿ ವಾಟರ್ ಪ್ಲ್ಯಾಂಟ್ ನಡೆಸುತ್ತಿದ್ದೇವೆ. ಆದರೆ ತಾಲೂಕಿನ ದಂಡೋತಿ, ಚಿತ್ತಾಪುರ ಸೇರಿದಂತೆ ಸಮೀಪದ ಕಾಳಗಿ, ಮಳಖೇಡ, ರಾವೂರ, ವಾಡಿ ಮತ್ತು ಶಹಾಬಾದ ನಗರಗಳಲ್ಲಿ ಅನಾಧಿಕೃತವಾಗಿ ಹಾಗೂ ಸರ್ಕಾರದಿಂದ ಯಾವುದೇ ಮಾನ್ಯತೆಯನ್ನು ಪಡೆದುಕೊಳ್ಳದೇ ಶುದ್ಧ ನೀರಿನ ಘಟಕ ನಡೆಸುತ್ತಿದ್ದಾರೆ. ಕೂಡಲೇ ಅನಾಧಿಕೃತ ಘಟಕಗಳ ಮೇಲೆ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಜ್ಯೋತಿ ಡ್ರಿಂಕಿಂಗ್ ವಾಟರ್ ಪ್ಲ್ಯಾಂಟ್ ಮಾಲಿಕ ಶರಣರೆಡ್ಡಿ ಗುರುನಾಥರೆಡ್ಡಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಬಿಐಎಸ್‍ನಿಂದ ಪರವಾನಿಗೆ ಪಡೆಯದ ಐಎಸ್‍ಐ ಪ್ರಮಾಣ ಪತ್ರ ತಹಿತ ಪ್ಯಾಕೇಜ್ ಕುಡಿಯುವ ನೀರಿನ ತಯಾರಿಕಾ ಘಟಕ ಮತ್ತು ಮಾರಾಟ ಮಾಡುತ್ತಿರುವ ಘಟಕಗಳನ್ನು ಅನಾಧಿಕೃತ ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಕಲಬುರಗಿ ಜೇಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದರೂ ಇಲ್ಲಿವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಅಸೋಸಿಯೇಷನ್ ಪದಾಧಿಕಾರಿಗಳಾದ ಮಂಜುನಾಥ ಪುಲಸೆ, ನಾಗು ಗುತ್ತೇದಾರ, ರಘು, ಮುಜೀಬ್, ಶೇಖಬಾಬು ಹುಸ್ಮಾನ್ ಸೇರಿದಂತೆ ಇತರರು ಇದ್ದರು.
Comments are closed.