ಅಮರೇಶ್ವರ ಜಾತ್ರೆಯಲ್ಲಿ ಗಮನಸೆಳೆದ ಪೋಷಣಾ ಅಭಿಯಾನ ಮಳಿಗೆ
ಔರಾದ್ ಅಮರೇಶ್ವರ ಜಾತ್ರೆ ನಿಮಿತ್ಯ ಸಂತಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಾಕಿರುವ ಪೋಷಣಾ ಅಭಿಯಾನ ಮಳಿಗೆ.
ಔರಾದ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ, ಗರ್ಭಿಣಿ ಮಹಿಳೆಯರಿಗೆ ಮಾತೃ ವಂದನಾ ಅರ್ಜಿಗಳನ್ನು ವಿತರಿಸಿದರು. ರಾಜ್ಯ ಸ್ತ್ರೀ ಸಂಘ ಬೆಂಗಳೂರಿನ ಶಶಿಕಲಾ, ಸಿಡಿಪಿಒ ಶಂಭುಲಿಂಗ ಹಿರೇಮಠ, ಯೋಗೇಶ್ವರಿ, ಅನೀತಾ ಚಿಮಕೋಡೆ, ಪ್ರಿಯಾಂಕಾ, ಪ್ರೀತಿ ನಾಸೆ, ಉರ್ಮಿಳಾ, ಸ್ವಾತಿ ಬುಕ್ಕಾ ಸೇರಿದಂತೆ ಇನ್ನಿತರರು ಇದ್ದರು.
ಉದ್ಭವಲಿಂಗ ಅಮರೇಶ್ವರ ಜಾತ್ರೆ ಹಾಗು ರಥೋತ್ಸವದ ನಿಮಿತ್ಯ ಪಟ್ಟಣದಲ್ಲಿ ಸಂತಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಾಕಿರುವ ಪೋಷಣಾ ಅಭಿಯಾನ ಮಳಿಗೆ ಎಲ್ಲರ ಗಮನಸೆಳೆಯಿತು.
ಪೋಷಣಾ ಅಭಿಯಾನ ಮಳಿಗೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ರಕ್ತಹೀನತೆ ನಿವಾರಣೆ ಮತ್ತು ಪೌಷ್ಠಿಕ ಆಹಾರ ಕೊರತೆ ನೀಗಿಸಲು ಇಲಾಖೆಯಲ್ಲಿರುವ ಹಲವಾರು ಯೋಜನೆಗಳನ್ನು ಎಲ್ಲರು ಬಳಸಿಕೊಂಡು ಸಮೃದ್ಧ ಜೀವನ ನಡೆಸಬೇಕು ಎಂದರು.
ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಇದೇ ಸಂಧರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಮಾತೃ ವಂದನಾ ಅರ್ಜಿಗಳನ್ನು ವಿತರಣೆ ಮಾಡಲಾಯಿತು. .
ರಾಜ್ಯ ಸ್ರ್ತೀ ಸಂಘ ಬೆಂಗಳೂರಿನ ಶಶಿಕಲಾ, ಸಿಡಿಪಿಒ ಶಂಭುಲಿಂಗ ಹಿರೇಮಠ, ಯೋಗೇಶ್ವರಿ, ಅನೀತಾ ಚಿಮಕೋಡೆ, ಪ್ರಿಯಾಂಕಾ, ಪ್ರೀತಿ ನಾಸೆ, ಉರ್ಮಿಳಾ, ಸ್ವಾತಿ ಬುಕ್ಕಾ ಸೇರಿದಂತೆ ಇನ್ನಿತರರು ಇದ್ದರು.
Comments are closed.