Shubhashaya News

BIG NEWS: ಸಾಹುಕಾರ್ ಸಿಡಿ ಪ್ರಕರಣ – ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದ ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲು ಸಿದ್ಧ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ದೂರು ದಾಖಲಾದ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಯುವತಿ ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೇಳಿದ್ದಾಳೆ. ಅಲ್ಲದೇ ಸಿಡಿ ಪ್ರಕರಣದ ಬಳಿಕ ತಮಗಾಗುತ್ತಿರುವ ತೊಂದರೆ, ಬೆದರಿಕೆ ಹಾಗೂ ಆತ್ಮಹತ್ಯೆ ಯತ್ನದ ಬಗ್ಗೆಯೂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದಿಂದ ಯುವತಿಗೆ ರಕ್ಷಣೆ ನೀಡಲಾಗುವುದು ಎಂದರು.

ಈಗಾಗಲೇ ಕಮಿಷ್ನರ್ ಜೊತೆ ಕೂಡ ಈ ಬಗ್ಗೆ ಮಾತನಾಡಿದ್ದೇನೆ. ಇನ್ನು ಯುವತಿ ಕುಟುಂಬಕ್ಕೂ ರಕ್ಷಣೆ ನೀಡಲಾಗುವುದು. ಯುವತಿಯಾಗಲಿ, ಆಕೆ ಕುಟುಂಬದವರಾಗಲಿ ಧೃತಿಗೆಡುವುದು ಬೇಡ. ಆತ್ಮಹತ್ಯೆಯೊಂದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಧೈರ್ಯ ತುಂಬಿದ್ದಾರೆ.

COURTESY: DAILY HUNT

Don`t copy text!