Shubhashaya News

ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಐಪಿಎಲ್ 14ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗುವ ಮುನ್ನ ಸನ್ಯಾಸಿ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಐಪಿಎಲ್ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್‌ನ ಪ್ರಚಾರ ಜಾಹೀರಾತಿನಲ್ಲಿ ಧೋನಿ, ಕೇಶಮುಂಡನ ಮಾಡಿಸಿಕೊಂಡಿರುವ ಸನ್ಯಾಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಪಿಎಲ್ ಜಾಹೀರಾತಿನ ಸಣ್ಣ ಝಲಕ್ ಮಾತ್ರ ಬಿಟ್ಟುಕೊಟ್ಟಿರುವ ಸ್ಟಾರ್ ಸ್ಪೋರ್ಟ್ಸ್, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಧೋನಿ ಮೈದಾನದಲ್ಲಿ ಪ್ರದರ್ಶಿಸುವ ಶಾಂತಚಿತ್ತದ ಪ್ರತಿಬಿಂಬ ಇದಾಗಿದೆ ಎಂದೂ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ‘ಮಾರ್ಷಲ್ ಆರ್ಟ್ಸ್ ತರಬೇತಿ ಶಿಬಿರ’ ಎಂದೂ ಸ್ಟಾರ್ ಸ್ಪೋರ್ಟ್ಸ್ ಈ ಚಿತ್ರದ ಬಗ್ಗೆ ಸಣ್ಣ ಮಾಹಿತಿಯನ್ನೂ ಬಿಟ್ಟುಕೊಟ್ಟಿತ್ತು. ಇದರ ಬೆನ್ನಲ್ಲೇ ಐಪಿಎಲ್ ಜಾಹೀರಾತಿನ ವಿಡಿಯೋವನ್ನೂ ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದೆ.

ಧೋನಿ ಸದ್ಯ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ತರಬೇತಿ ಶಿಬಿರದಲ್ಲಿದ್ದು, ಈ ಬಾರಿ ತಂಡವನ್ನು ಮರಳಿ ಲಯಕ್ಕೆ ತರುವ ಹಂಬಲದಲ್ಲಿದ್ದಾರೆ. 2020ರಲ್ಲಿ ಸಿಎಸ್‌ಕೆ ತಂಡ ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆಫ್​ ಹಂತಕ್ಕೇರಲು ವಿಫಲವಾಗಿತ್ತು.

COURTESY: DAILYB HUNT

Comments are closed.

Don`t copy text!