ಕೊನೆಗೂ SIT ಬಲೆಗೆ ಇಬ್ಬರು ಯುವಕರೊಂದಿಗೆ ಹೈದ್ರಾಬಾದ್‌ನಲ್ಲಿ ಸಿಕ್ಕಿಬಿದ್ದ ಸಿಡಿಯಲ್ಲಿರುವ ಯುವತಿ.!?
ಇಂದು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಶಿಫ್ಟ್
ಶಾಸಕ ರಮೇಶ್ ಜಾರಕಿಹೊಳಿಯವರ ಮೇಲಿರುವ ಸಿಡಿ ಕೇಸಿನ ಆರೋಪಕ್ಕೆ ಸಂಬಂಧಪಟ್ಟಂತೆ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಯುವತಿ ಕೊನೆಗೂ ಹೈದ್ರಾಬಾದಿನಲ್ಲಿ ಎಸ್‌ಐಟಿ ತಂಡಕ್ಕೆ ಸಿಕ್ಕಿದ್ದಾಳೆ ಎನ್ನಲಾಗಿದೆ.
ಹೈದ್ರಾಬಾದ್‌ನಲ್ಲಿ ಯುವತಿ ಇಬ್ಬರು ಯುವಕರೊಂದಿಗೆ ಇದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿ ಎಸ್‌ಐಟಿ ತಂಡದ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಯುವತಿ ಸೇರಿದಂತೆ ಮೂವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಈಗಾಗಲೇ ಎಸ್‌ಐಟಿ ತಂಡ ಮೂವರನ್ನು ತಮ್ಮೊಂದಿಗೆ ಹೈದ್ರಾಬಾದ್‌ನಿಂದ ಬೆಂಗಳೂರಿನತ್ತ ಪಯಾಣ ನಡೆಸುತ್ತಿದ್ದು, ಸದ್ಯ ಬೆಂಗಳೂರಿನ ಮಡಿವಾಳದಲ್ಲಿರುವ ಪೊಲೀಸ್ ಟೆಕ್ನಿಕಲ್ ಸೆಂಟರ್ಗೆ ಕರೆದುಕೊಂಡು ಬಂದು ವಿಚಾರಣೆ ನಡೆಸ ಬಹದು ಎನ್ನಲಾಗುತ್ತಿದೆ. ಈಗಾಗಲೇ ಮಡಿವಾಳದ ಪೊಲೀಸ್ ಟೆಕ್ನಿಕಲ್ ಸೆಂಟರ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಆಯೋಜಿಸಿದ್ದು, . ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗುವುದು ಅಂತ ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.
ನಿನ್ನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಆ ಯುವತಿ ಗೃಹ ಸಚಿವರಾದ ಬೊಮ್ಮಯಿವರ ಬಳಿ ನಾನು ಇಶ್ಟೂ ಮಾತ್ರ ಹೇಳಿ ಕೊಳ್ಳುತ್ತಿರುವೆ, ಈ ವಿಡಿಯೋ ಹೇಗೆ ಮಾಡಿದ್ರು ಅನ್ನೊಂದು ನನಗೆ ತಿಳಿದಿಲ್ಲ, ಆಲ್‌ರೆಡಿ ನನ್ನ ಮಾನಮಾರ್ಯದಿ ಊರು ತುಂಬಾ ಹರಾಜು ಆಗಿದೆ, ಹಲವು ಮಂದಿ ಮನೆ ಮಂದಿ ಕೇಳಿಕೊಂಡು ಹೋಗುತ್ತಿದ್ದಾರೆ. ನಮ್ಮ ಅಪ್ಪ-ಅಪ್ಪ ಎರಡು ಸರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಲ್ಲದೇ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವೆ.
ನಮ್ಮ ಹಿಂದೆ ಯಾರು ಇಲ್ಲ, ಪೊಲಿಟಿಕಲ್ ಸಪೋರ್ಟ್ ಇಲ್ಲ, ನನಗೆ ಯಾವುದೇ ತೆರನಾದ ರಕ್ಷಣೆ ಇಲ್ಲ, ನಿಮ್ಮೆಲರ ಬಳಿ ನನಗೆ ರಕ್ಷಣೆ ಕೊಡಿ ಅಂತ ಈ ಮೂಲಕ ಕೇಳಿ ಕೊಳ್ಳುತ್ತಿದ್ದೇನೆ, ಇದಲ್ಲದೇ ನನಗೆ ರಮೇಶ್ ಜಾರಕಿಹೊಳಿಯವರು ಕೆಲಸ ಕೊಡಿಸುವುದಾಗಿ ಹೇಳಿ, ಅದೆಲ್ಲ ಹೇಳಿ ವಿಡಿಯೋವನ್ನು ಹೊರಗೆ ಬಿಡುತ್ತಿದ್ದಾರೆ. ನನಗೆ ಅದೆಲ್ಲ ಗೊತ್ತಿಲ್ಲ ಅಂತ ಆಕೆ ಹೇಳಿದ್ದಳು.
COURTESY: DAILY HUNT
Comments are closed.