ಕೋವಿಡ್ ಹಿನ್ನೆಲೆ: ನಾಟಕಗಳ ಪ್ರದರ್ಶನಕ್ಕೆ ಒತ್ತಾಯ
ಸಿನಿಮಾಮಂದಿರಗಳು, ರಂಗಮಂದಿರಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿದ್ದೀರಿ ಆದರೆ ನಾಟಕ ಪ್ರದರ್ಶನಕ್ಕೆ ಏಕೆ ಅನುಮತಿ ನೀಡುತ್ತಿಲ್ಲ.?
ಕಲಬುರಗಿ: ರಂಗಮಂದಿರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸರ್ಕಾರ ಅವಕಾಶ ನೀಡಿದ್ದರೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ವೃತ್ತಿ ನಾಟಕಕಂಪನಿಗಳಿಗೆ ಪ್ರದರ್ಶನಕ್ಕೆ ಪರವಾನಗಿ ನೀಡುತ್ತಿಲ್ಲ.ಇದರಿಂದ ವೃತ್ತಿ ರಂಗಭೂಮಿ ಕಲಾವಿದರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ) ಬಣದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ನಾಟೀಕಾರ ಆರೋಪಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಕೋವಿಡ್ ಕಾರಣದಿಂದಾಗಿ ಎಂಟು ತಿಂಗಳಿನಿಂದ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿಲ್ಲ. ಇದರಿಂದ ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರವನ್ನೇ ಜೀವನಾಧಾರವಾಗಿ ನೆಚ್ಚಿಕೊಂಡವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಲಾಕ್‌ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಿದ ಬಳಿಕ ಸಿನಿಮಾಮಂದಿರಗಳು, ರಂಗಮಂದಿರಗಳು, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿದ್ದೀರಿ ಆದರೆ ನಾಟಕ ಪ್ರದರ್ಶನಕ್ಕೆ ಏಕೆ ಅನುಮತಿ ನೀಡುತ್ತಿಲ್ಲ.? ಎಂದು ಪ್ರಶ್ನಿಸಿದರು.
ಇಷ್ಟಾಗಿಯೂ ತಹಶೀಲ್ದಾರ್‌ಗಳು ಸಾರ್ವಜನಿಕರಿಗೆ ‘ ಸರಿಯಾಗಿ ಸ್ಪಷ್ಟನೆ ನೀಡುತ್ತಿಲ್ಲ ಅವರು ಸ್ಪಷ್ಟನೆ ನೀಡದೇ ನಿರಾಕರಿಸುತ್ತಿರುವುದು ವೃತ್ತಿ ನಾಟಕ ಕಂಪನಿಗಳ ಮುಖ್ಯಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಸಂಬಂಧ ಸರ್ಕಾರವು ಕೂಡಲೇ ಪ್ರತ್ಯೇಕ ಆದೇಶವನ್ನು ಹೊರಡಿಸಬೇಕು ಎನ್ನುವುದು ಅವರ ಒತ್ತಾಯ.
ಕಲೆಯನ್ನೇ ನಂಬಿಕೊಂಡಿದ್ದ ಕಲಾವಿದರ ಬದುಕು ಲಾಕ್‌ಡೌನ್ ಹಾಗೂ ಕೋವಿಡ್ ನಿಂದಾಗಿ
ಬೀದಿಗೆ ಬಿದ್ದಿದೆ ರಾಜ್ಯದಲ್ಲಿ 24 ವೃತ್ತಿ ನಾಟಕ ಕಂಪನಿಗಳಿವೆ. ಸರ್ಕಾರಕ್ಕೆ ಕಲಾವಿದರು ಹಾಗೂ ಕಲೆಯ ಬಗ್ಗೆ ಕಾಳಜಿ ಇದ್ದಲ್ಲಿ ಕೂಡಲೇ ಪ್ರತ್ಯೇಕ ಆದೇಶವನ್ನು ಹೊರಡಿಸಿ, ಪ್ರದರ್ಶನಕ್ಕೆ ಅನುವು ಮಾಡಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.
ಎಲ್ಲ ವೃತ್ತಿ ನಾಟಕ ಸಂಸ್ಥೆಗಳಿಗೆ ಪರವಾನಗಿ ಸಿಕ್ಕರೆ ಸಾಕಾಗಿದೆ. ಕೋವಿಡ್ ಕಾರಣ ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಿ, ನಾಟಕ ಆರಂಭಿಸುತ್ತಾರೆ. ಟಿಕೆಟ್ ಮೂಲಕ ಬಂದ ಹಣದಲ್ಲಿ ಜೀವನ ಸಾಗಿಸುತ್ತಾರೆ ಎಂದರು.ನಾಟಕ ಪ್ರದರ್ಶನಗಳಿಗೆ ಅವಕಾಶ ನೀಡುವ ಸಂಬಂಧ ಅಧಿಕಾರಿಗಳಲ್ಲಿನ ಗೊಂದಲ ನಿವಾರಿಸಲು ಸರ್ಕಾರ ಮತ್ತೊಮ್ಮೆ ಸ್ಪಷ್ಟವಾಗಿ ಅಧಿಸೂಚನೆ ಹೊರಡಿಸಬೇಕು. ಕಾಯಕಲ್ಪ ಯೋಜನೆಯಡಿ ಪ್ರತಿ ವೃತ್ತಿ ಕಂಪನಿಗೆ ₹2 ಲಕ್ಷ ಪರಿಹಾರ ಘೋಷಿಸಬೇಕು’ ಎಂದರು.
Comments are closed.