ಸುರಪುರ ತಾಲೂಕಿನಾಧ್ಯಂತ ಮರಳುಗಳ್ಳರ ಹಾವಳಿ ಜೋರಾಗಿದ್ದು ಹಾಡುಹಗಲೇ ಎಗ್ಗಿಲ್ಲದೆ ಸಾಗುತ್ತಿದೆ ಅಕ್ರಮ ಮರಳು ದಂಧೆ.
ಈ ಬಗ್ಗೆ ಅನೇಕ ಬಾರಿ ಸಾಮಾಜಿಕ ಕಾರ್ಯಕರ್ತರು,ಸ್ಥಳೀಯ ಹೋರಾಟಗಾರರು ಹಲವು ಭಾರಿ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಸ್ಥಳೀಯ ಹೋರಾಟಗಾರರು.
ಇನ್ನು ಹಾಡುಹಗಲೇ ರಾಜಾರೋಷವಾಗಿ ಸಾಗುವ ಬೃಹದಾಕಾರದ ವಾಹನಗಳು ರಸ್ತೆ ಮೇಲೆ ಮರುಳನ್ನ ಹೊತ್ತು ಸಾಗುವ ದೃಶ್ಯಾವಳಿಗಳು ಸರ್ವೆ ಸಾಮಾನ್ಯವಾಗಿವೆ.
ಎಷ್ಟೆಲ್ಲ ರಾಜಾರೋಷವಾಗಿ ನಡೆಯುವ ಈ ಅಕ್ರಮ ಮರಳು ದಂಧೆ ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿರುವ ಪೊಲೀಸ್ ಇಲಾಖೆಯನ್ನು ಗಮನಿಸಿದರೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಅಂತಾರೆ ಹೋರಾಟಗಾರ ಹಣಮಂತ ಭಂಗಿ.
ಕೃಷ್ಣ ನದಿಯ ಒಡಲನ್ನು ಬಗೆದು ಅಕ್ರಮ ಮರಳು ಸಾಗಾಟ ಮಾಡುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಾ ಕಾದುನೋಡಬೇಕಿದೆ.
Comments are closed.