Shubhashaya News

ಬರವಣಿಗೆ ಮೂಲಕ ಹೆಸರು ವಾಸಿಯಾದ ರವಿ ಬೆಳೆಗರೆ: ಇವಣಿ

ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಪತ್ರಿಕಾ ರಂಗದಲ್ಲಿ ಹೇಗೆ ಬೆಳೆಯಬೇಕು ಸುದ್ದಿಗಳನ್ನು ಹೇಗೆ ಬರೆಯಬೇಕು ಎಂದು ತೋರಿಸಿಕೊಡುತ್ತಿದ್ದರು.

ಚಿತ್ತಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಕ್ಷರ ಲೋಕದ ನಕ್ಷತ್ರ ರವಿ ಬೆಳೆಗರೆ ಅವರ ಜನ್ಮದಿನ ಆಚರಿಸಲಾಯಿತು.

ಬರವಣಿಗೆ ಮೂಲಕ ಇಡೀ ವಿಶ್ವದಲ್ಲಿಯೇ ಹೆಸರು ವಾಸಿಯಾದವರು ರವಿ ಬೆಳೆಗೆರೆ ಎಂದು ಕನ್ನಡ ಸೇನೆ ತಾಲೂಕು ಅಧ್ಯಕ್ಷ ಹಾಗೂ ರವಿ ಬೆಳೆಗರೆ ಆಪ್ತ ರವಿ ಇವಣಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ರವಿ ಬೆಳೆಗೇರೆ ಜನ್ಮ ದಿನದ ಪ್ರಯುಕ್ತ ಕೇಕ್ ಕತ್ತರಿಸಿ ಮಾತನಾಡಿದ ಅವರು, ಅವರಿಗೆ ಯಾವುದೇ ಒಂದು ವಿಷಯ ಸಿಕ್ಕರೇ ಸಾಕು ಲೇಖನಗಳನ್ನು ಬರೆಯುವ ಮೂಲಕ ಓದುಗರ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದರು. ಅದರ ಜೊತೆಗೆ ಪ್ರಸ್ತುತ ಘಟನೆಗಳ ಬಗ್ಗೆ ಯಾರಿಗೂ ಅಂಜ್ಜದೆ ಅಳುಕದೆ ಪುಸ್ತಕಗಳನ್ನು ಬರೆದು ಯುವಕರಿಗೆ ಹಾಗೂ ಹಿರಿಯರಿಗೆ ಓದುವ ಅಭಿರುಚಿ ಬೆಳೆಸಿ ಜ್ಞಾನದ ಸಂಪತ್ತನ್ನು ನೀಡಿದರು ಎಂದು ಬಣ್ಣಿಸಿದರು.


ರವಿ ಬೆಳೆಗರೆ ಎಂದರೇ ಸಾಕು ಅವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಪತ್ರಿಕಾರಂಗ, ಸಿನಿಮಾ, ರಾಜಕೀಯ, ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಪತ್ರಿಕಾ ರಂಗದಲ್ಲಿ ಹೇಗೆ ಬೆಳೆಯಬೇಕು ಸುದ್ದಿಗಳನ್ನು ಹೇಗೆ ಬರೆಯಬೇಕು ಎಂದು ತೋರಿಸಿಕೊಡುತ್ತಿದ್ದರು. ಪತ್ರಿಕಾ ರಂಗದಲ್ಲಿ ಹಣಕ್ಕಾಗಿ ಬರದೇ ಹೆಸರು ಮಾಡಲಿಕ್ಕೆ ಬರಬೇಕು ಎಂದು ಪ್ರತಿಯೊಬ್ಬ ಯುವ ಪತ್ರಕರ್ತರಿಗೆ ಹೇಳುತ್ತಿದ್ದರೂ. ಅವರ ಮನೆಗೆ ಭೇಟಿ ನೀಡಿದಾಗ ಕೈ ಯಲ್ಲಿ ಪೆನ್ನು ಎದರುಗಡೆ ಒಂದು ಪೇಜ್ ಮಾತ್ರ ಇಟ್ಟಿಕೊಂಡಿರುತ್ತಿದ್ದರು. ನಾನು ಭೇಟಿ ನೀಡಿದಾಗೊಮ್ಮೆ ಏನಪ್ಪ ರವಿ ಹೇಗಿದಿಯಾ ಏನು ನಡಿತಿದೆ ಎಂದು ಕೇಳಿ ಪ್ರಿತಿಯಿಂದ ಮಾತನಾಡಿಸುತ್ತಿದ್ದರು. ಆದರೆ ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ವಿಚಾರಗಳು ನಮಗೇಲ್ಲರಿಗೂ ದಾರಿ ದೀಪವಾಗಿವೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ರವಿ ಬೆಳೆಗರೆ ಅಪಾರ ಜ್ಞಾನ ಉಳ್ಳವರಾಗಿದ್ದರು. ಅವರು ಪತ್ರಿಕಾ ಲೋಕದಲ್ಲಿ ಅಪಾರ ಹೆಸರು ಮಾಡಿದ್ದರು. ಮುಂದಿನ ದಿನಗಳಲ್ಲಿ ಅವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳು ಮಾಡಿದರೂ ಸಹಾಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ರವಿ ಬೆಳೆಗರೆ ಅವರ ಆಪ್ತ ರವಿ ಇವಣಿ ಆಗಿದ್ದರು. ಹೀಗಾಗಿಯೇ ಚಿತ್ತಾಪುರಿನಲ್ಲಿ ಜ್ಯೂನಿಯರ್ ರವಿ ಬೆಳೆಗರೆ ಎಂದೇ ರವಿ ಇವಣಿಯವರು ಹೆಸರುವಾಸಿಯಾಗಿದ್ದಾರೆ. ಅವರ ಆಪ್ತರಾಗಿ ಗುರುತಿಸಿಕೊಂಡು ಯಾವಾಗಲೂ ರವಿ ಬೆಳೆಗೇರೆ ಅವರ ಬಗ್ಗೆಯೆ ಹೆಚ್ಚು ಆಸಕ್ತಿ ತೋರಿಸಿ ಇಂದು ಅವರ ಜನ್ಮದಿನ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯ ಕಾರ್ಯಕರ್ಯಕ್ರಮಗಳನ್ನು ಹಮ್ಮಿಕೊಂಡು ಪತ್ರಿಕಾ ರಂದಗದಲ್ಲಿ ಸಾಧನೆಗೈದ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಬೇಕು ಎಂದು ಹೇಳಿದರು.
ಇದೇ ವೆಳೆ ಪತ್ರಕರ್ತರಿಗೆ ಸನ್ಮಾನಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಈರಪ್ಪ ಭೋವಿ, ಉದ್ದಿಮೆದಾರ ಮಲ್ಲಿಕಾರ್ಜು ಸಜ್ಜನಶೆಟ್ಟಿ, ಪುರಸಭೆ ವಿರೋಧಪಕ್ಷದ ನಾಯಕ ನಾಗರಾಜ ಭಂಕಲಗಿ, ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಮುಖಂಡರಾದ ಗುರುಲಿಂಗಯ್ಯಸ್ವಾಮಿ ಪುರದಯ್ಯನಮಠ, ದೇವಿಂದ್ರ ಅಣಕಲ್, ನಾಗರಾಜ ಸುಲ್ತಾನಪುರ, ಮಲ್ಲಿಕಾರ್ಜುನ ಬೆಣ್ಣೂರಕರ್, ಲೋಹಿತ್ ಮುದ್ದಡಗಿ, ಗೌರಿಶಂಕರ ಬಂಡಿ, ಸೋಮು ಕುಂಬಾರ, ಉಮೇಶ ಕುಕ್ಕಂದಿ, ರವಿ ದೊಡ್ಮನಿ, ರಾಜು ಗೊಬ್ಬುರ್, ರವಿ ಕಾಂತಾ, ವಿವೇಕ್ ನೀಲಿ ಇದ್ದರು.
ಬಾಬು ಕಾಶಿ ನಿರೂಪಿಸಿದರು. ನರಸಿಂಹ ವಂದಿಸಿದರು.

Comments are closed.

Don`t copy text!