ತೋನಸನಳ್ಳಿ (ಟಿ) ಗ್ರಾಮದ ಯುವಕರು ಬಿಜೆಪಿ ಸೇರ್ಪಡೆ
ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ
ಚಿತ್ತಾಪುರ: ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ 40ಕ್ಕೂ ಹೆಚ್ಚು ಯುವಕರು ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸಂಸದ ಡಾ. ಉಮೇಶ ಜಾಧವ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜನಪರ ಯೋಜನೆಗಳು ಜನರಿಗೆ ತುಂಬಾ ಅನುಕೂಲಗಳಾಗಿವೆ. ಹೀಗಾಗಿಯೇ ಇವೇಲ್ಲವನ್ನು ಮೆಚ್ಚಿ ಯುವಕರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಸಂತೋಷದ ಸಂಗಾತಿಯಾಗಿದೆ ಎಂದರು.
ತೋನಸನಳ್ಳಿ (ಟಿ) ಗ್ರಾಮದ ಅಂಬಾರಾಯ ತೆಳಕೇರಿ, ಖಲೀಲ್ಮಿಯ್ಯಾ ಮುಲ್ಲಾ, ಶಿವಾನಂದ ತಳಕೇರಿ, ಮಲ್ಲಕಾರ್ಜುನ ಕೊಂಕನಳ್ಳಿ ಸೇರಿ 40ಕ್ಕೂ ಹೆಚ್ಚು ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಸಿದ್ದಾಜೀ ಪಾಟೀಲ್, ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದು ಪಾಟೀಲ್, ಬಸವರಾಜ ಬೆಣ್ಣೂರಕರ್, ಸಂತೋಷ ಪಾಟೀಲ್ ಮಂಗಲಗಿ, ಮಲ್ಲಿಕಾರ್ಜುನ ಎಮ್ಮೆನೂರ್, ಸೋಮಶೇಖರ ಪಾಟೀಲ್ ಬೆಳಗುಂಪಾ, ವಿಜಯಕುಮಾರ ನಿಂಗದೆ, ರವಿ ಸಜ್ಜನಶೇಟ್ಟಿ, ಸಂತೋಷ ಸೂರಾರ ಇದ್ದರು.
Comments are closed.