Shubhashaya News

ಏಪ್ರಿಲ್ 15ರವರೆಗೆ ನೀರು ಹರಿಸುವಂತೆ ಹಸಿರು ಸೇನೆ ಒತ್ತಾಯ.!

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಇಂದು ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ನಾರಾಯಣಪುರ ಡ್ಯಾಂ ಮೂಲಕ ಎಡದಂಡೆ ಕಾಲುವೆ ರೈತರ ಜಮೀನುಗಳಿಗೆ ದಿನಾಂಕ 15.04.2021ವರೆಗೆ ನೀರನ್ನು ಹರಿಸುವಂತೆ ಆಗ್ರಹಿಸಿ ನಾರಾಯಣಪುರದ ವಾಲ್ಮೀಕಿ ವೃತ್ತದಿಂದ ಮುಖ್ಯ ಅಭಿಯಂತರರು ಕೆಬಿಜೆಎನ್ಎಲ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಅಯ್ಯಣ್ಣ ಹಾಲಬಾವಿ, ತಾಲ್ಲೂಕು ಅಧ್ಯಕ್ಷರಾದ ಹನುಮನಗೌಡ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ಎಇಇ ಮೂಲಕ ಮುಖ್ಯ ಅಭಿಯಂತರರು ಕೆಬಿಜೆಎನ್ಎಲ್ ನಾರಾಯಣಪೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅನೇಕ ರೈತರು ಭಾಗವಹಿಸಿದ್ದರು.

Comments are closed.

Don`t copy text!