ಯಾದಗಿರಿ: ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಜಿ ಸುರಪುರದ ಸಿಡಿಪಿಓ ಕಚೇರಿಯೆದುರು ಅಂಗನವಾಡಿ ಕಾರ್ಯಕರ್ತೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ , ತಾಲ್ಲೂಕು ಸಮಿತಿ ಸಿಐಟಿಯು ಸಂಯೋಗದಲ್ಲಿ ಧರಣಿ ಕುಳಿತ ಕಾರ್ಯಕರ್ತೆಯರು,
ಸುಮಾರು 40 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರದ ಬಹುತೇಕ ಯೋಜನೆಗಳನ್ನು ಜನರಿಗೆ ತಲುಪಲು ಕಾರಣರಾಗಿದ್ದೇವೆ.
ಅಲ್ಲದೇ ಬಿಡುವಿಲ್ಲದ ಕೆಲಸ ಮಾಡುತ್ತಿರುವ ನಮಗೆ ಸರ್ಕಾರ ಖಾಯಂ ಮಾಡಬೇಕು, ಕನಿಷ್ಠ ವೇತನ 21 ಸಾವಿರ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಸಮ್ಮ ದೊರಿ ಅಲ್ದಾಳ, ರಾಧಾಬಾಯಿ ಸುರೇಖ ಎಸ್ ಕುಲಕರ್ಣಿ, ನಸೀಮಾ ಮುದ್ದೂರು ಸೇರಿದಂತೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು.
Comments are closed.