Shubhashaya News

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶೇಕ್ ಫರೀಧ್ ಊಮ್ರಿ ಅಯ್ಕೆ

ಮಾನ್ವಿ :  ಪುರಸಭೆಯ ನೂತನ  ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ  ಶೇಕ್ ಫರೀಧ್ ಊಮ್ರಿ ಅವರನ್ನು  ಸದಸ್ಯರ ಒಮ್ಮತ ಮೂಲಕ  ಅಯ್ಕೆ ಮಾಡಲಾಯಿತು.
ಈ ವೇಳೆ  ಮಾತನಾಡಿ ಶೇಕ್ ಪರೀಧ್ ಊಮ್ರಿ ಮಾತನಾಡಿ,  ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಅಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ನನಗೆ ಕೂಟ್ಟಿರುವ ಜವಾಬ್ದಾರಿಯನ್ನು ಹಿರಿಯರ ಮಾರ್ಗದರ್ಶನದಲ್ಲಿ ಪ್ರಮಾಣಿಕವಾಗಿ ಸಂವಿಧಾನದ ಅಡಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ  ಪಟ್ಟಣದ ಅಭಿವೃದ್ಧಿ ಅದ್ಯತೆ ನೀಡಲಾಗುವುದು ಎಂದರು.
ಕಾಂಗ್ರೇಸ್ ಮುಖಂಡ ರಾಜಾ ವಸಂತ ನಾಯಕ ಮಾತನಾಡಿ‌, ಪುರಸಭೆಯು ಕಾಂಗ್ರೆಸ್ ಪಕ್ಷ ಅಧಿಕಾರಿ ಚುಕ್ಕಾಣಿಯಲ್ಲಿದ್ದು ನಿಮಗೆ ಕೂಟ್ಟಿರುವ  ಅಧಿಕಾರದ ಅವಧಿಯಲ್ಲಿ ಉತ್ತಮ ಅಡಳಿತ ನೀಡುವುದರ ಜೂತೆಗೆ ಪುರಸಭೆಯ ಎಲ್ಲಾ ಸದಸ್ಯರ ಗಣನೆಗೆ ತೆಗೆದುಕೂಂಡು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಅಧ್ಯತೆ ನೀಡಿ ಎಂದರು.
ಈ ಸಂದರ್ಭದಲ್ಲಿ  ಪುರಸಭೆ ಮುಖ್ಯಾಧಿಕಾರಿ ಜಗದೀಶ, ಪುರಸಭೆ ಅಧ್ಯಕ್ಷೆ ಸುಫೀಯ್ ಬೇಗಂ, ಉಪಾಧ್ಯಕ್ಷ ಸುಕುಮುನಿ,‌ ಪುರಸಭೆ ಸರ್ವ ಸದಸ್ಯರು ಇದ್ದರು.

Comments are closed.

Don`t copy text!