Shubhashaya News

ರಮೇಶ್ ಜಾರಕಿಹೊಳಿ ಕಾಮಪುರಾಣ : CDಕೋರರ ಅಸಲಿ ಮುಖ ಅನಾವರಣ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪುರಾಣದ ಹಿಂದಿರುವ ಕಿಂಗ್ ಪಿನ್ ಗಳು ಎನ್ನಲಾದವರ ಹೆಸರು ಬಹಿರಂಗಗೊಂಡಿದೆ.

ಸುವರ್ಣ ವಾಹಿನಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಪ್ರಸಾರಮಾಡಿದೆ.

ಕಿಂಗ್ ಪಿನ್  1 : ನರೇಶ್ ಗೌಡ ಪತ್ರಕರ್ತ, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭುವನಹಳ್ಳಿ ಈತ ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಅನ್ನು ಆರೋಪ ಎದುರಿಸುತ್ತಿದ್ದಾನೆ. ಆರೋಪವನ್ನು ಸಾಬೀತು ಮಾಡುವ ಹೊಣೆ ಎಸ್ಐಟಿಯದ್ದಾಗಿದೆ.

ಕಿಂಗ್ ಪಿನ್  2 – ಶ್ರವಣ್, ಪತ್ರಕರ್ತ – ಹ್ಯಾಕಿಂಗ್ ಏಕ್ಸ್ ಪರ್ಟ್ ಆಗಿರುವ ಶ್ರವಣ್, ಸಿಡಿಯನ್ನು ಅಪ್ ಲೋಡ್ ಮಾಡಿದ ಆರೋಪವನ್ನು ಎದುರಿಸುತ್

ಕಿಂಗ್ ಪಿನ್  3 – ಭವಿತ್, ಪತ್ರಕರ್ತ -ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ ದೋಣಗುಡಿಗೆ ಮೂಲದ ಭವಿತ್ ಕಾಮಲೀಲೆಯಯ ಸಿಡಿಗೆ ಸ್ಕ್ರಿಪ್ಟ್ ಹಾಗೂ ವಾಯ್ಸ್ ಕೊಟ್ಟ ಆರೋಪ ಎದುರಿಸುತ್ತಿದ್ದಾನೆ.

ಕಿಂಗ್ ಪಿನ್  4 – ಆಕಾಶ್ ತಳವಾಡೆ, ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕನಾಗಿರುವ ಆಕಾಶ್, ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದವನಾಗಿದ್ದು, ಸಿಡಿ ಲೇಡಿಯ ಸ್ನೇಹಿತ ಈತ ಎಂದು ಹೇಳಲಾಗಿದೆ.

COURTESY: SUVARNA NEWS & TORANTOSPREE

Comments are closed.

Don`t copy text!