Shubhashaya News

ಬಿಜೆಪಿ ಯಾತ್ರೆಯ ಬಸ್ ಮೇಲೆ ದುಷ್ಕರ್ಮಿಗಳ ದಾಳಿ

ನವದೆಹಲಿ : ಪರಿವರ್ತನ್ ಯಾತ್ರೆಯ ಬಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ದೆಹಲಿಯ ಮನಬಜಾರ್ ಪಟ್ಟಣದಲ್ಲಿ ನಡೆದಿದೆ.

ಟಿಎಂಸಿ ಕಾರ್ಯಕರ್ತರು ಮತ್ತೆ ನಮ್ಮ ಪರಿವರ್ತನ್ ಯಾತ್ರೆಯ ಬಸ್ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ ಘಟನೆಯಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಭೀಕರ ದಾಳಿಗೆ ಬಸ್ಸಿನ ಮುಂಬಾಗದ ಗ್ಲಾಸು ಒಡೆದು ಹೋಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

COURTESY: DALIY HUNT

Comments are closed.

Don`t copy text!