ಗ್ರಾಮೀಣ ಭಾಗದ ಜನರು ಇತರೆ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು “ದುಡಿಯೋಣ ಬಾ” ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ ಎಂದು ಬಿದನೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಂಬವ್ವ ಹೇಳಿದರು.
ಅವರು ಬುಧವಾರ ಅಫಜಲಪುರ ತಾಲೂಕಿನ ಬಿದನೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬಿದನೂರ ಕೆರೆ ಹೂಳೆತ್ತುವ ಸ್ಥಳದಲ್ಲಿ ದುಡಿಯೋಣ ಬಾ” ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಜನರು ಬೇರೆ ರಾಜ್ಯಗಳಿಗೆ ಗೂಳೆ ಹೋಗದೆ ಸ್ವ ಗ್ರಾಮದಲ್ಲಿಯೇ ಇದ್ದು, ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಪಡೆದು ಇದರ ಲಾಭ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಅಷ್ಠಗಿ, ಯುವ ರೈತ ಅರುಣ ಹರಳಯ್ಯ, ಐಇಸಿ ಸಂಯೋಜಕರು, ಕಾಯಕ ಬಂದುಗಳು ಹಾಗೂ 300 ಜನ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು
Comments are closed.