Shubhashaya News

ಚಿಲಿಪಿಲಿ ಸಂಗೀತ ಪ್ರತಿಭಾನ್ವೇಷಣ ಪರೀಕ್ಷೆ: ನಾಲ್ಕು ಜನ ಅಂಧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

ಕಲಬುರಗಿ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯ 2019-20ನೇ ಸಾಲಿನಲ್ಲಿ ಜರುಗಿದ ಚಿಲಿಪಿಲಿ ಸಂಗೀತ ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ಈ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಲಬುರಗಿ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯ ಅಧೀಕ್ಷಕರು ತಿಳಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಗಳಾದ ಜ್ಞಾನೇಶ್ವರ ತಂದೆ ಪ್ರಕಾಶ, ಗಣೇಶ ತಂದೆ ಮಾಣಿಕ, ಮಲ್ಲಪ್ಪ ತಂದೆ ಹಣಮಂತ ಹಾಗೂ ಮಲ್ಲಿನಾಥ ಅವರು ಚಿಲಿಪಿಲಿ ಸಂಗೀತ ಪ್ರತಿಭಾನ್ವೇಷಣ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸಾಧಿಕ ಹುಸೇನ್ ಖಾನ್ ಹಾಗೂ ಅಧೀಕ್ಷಕಿ ಸಂಗಮ್ಮ ಅವರು ಪ್ರಮಾಣಪತ್ರ ವಿತರಿಸಿದರು.

Comments are closed.

Don`t copy text!