ಕಲಬುರಗಿ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿ-ಧಾರವಾಡದಿಂದ ಹಂದಿ ಹಿಡಿಯುವ ತಂಡವನ್ನು ಕರೆಯಿಸಿ ಕಲಬುರಗಿ ನಗರದ ಈ ಕೆಳಕಂಡ ಬಡಾವಣೆಗಳಲ್ಲಿ ಬುಧವಾರದಂದು ಸುಮಾರು 720ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡದ 18 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವು ಕಲಬುರಗಿ ನಗರದ ಗೊಲ್ಲೂರ್ ಗಲ್ಲಿ, ಎಂ.ಜಿ. ರಸ್ತೆ, ಮಸ್ಬ್ದಾರ್ ಲೇ-ಓಟ್, ಗುಬ್ಬಿ ಕಾಲೊನಿ, ಆರ್ದಶ ನಗರ ಕಾಲೋನಿ, ಆಯಿಶಾ ಕಾಲೋನಿ, ಉಮರ್ ಕಾಲೋನಿ, ಗಣೇಶ ನಗರ, ಜಯನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿರುವ ಬೀದಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆ ಕಲಬುರಗಿಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಹ್ಮದ್ ಸಖಾವತ ಹುಸೇನ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಹಣಮಂತ ಹಬ್ಶಿಯಾಳ, ನೈರ್ಮಲ್ಯ ನಿರೀಕ್ಷಕರಾದ ನಾಗರಾಜ, ಬಸವರಾಜ ಪಾಣೆಗಾಂವ ಹಾಗೂ ಮತ್ತಿತರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
Comments are closed.