Shubhashaya News

ಕಲಿತ ಕೌಶಲ್ಯ ಎಂದಿಗೂ ಕೈ ಬಿಡುವುದಿಲ್ಲ

ಭಾಲ್ಕಿ :- ತಾವು ಕಲಿತದ್ದನ್ನು ಎಲ್ಲರೂ ಮುಂದಿನ ದಿನಗಳಲ್ಲಿ ಜೀವನದಲ್ಲಿ ಕಾರ್ಯಗತಗೊಳಿಸಿ ಕೊಂಡು ಸ್ವಾವಲಂಬಿ ಜೀವನಕ್ಕೆ ಕೈಜೋಡಿಸುವಂತೆ ತಾಲೂಕು ಪಂಚಾಯತ್ ಉಪಾಧ್ಯಕ್ಷ ಮಾರುತಿ ಮಗರ್ ನುಡಿದರು.
ಅವರು ಗುರುವಾರ ಭಾಲ್ಕಿ ತಾಲೂಕಿನ ಮಾಣಿಕೇಶ್ವರ ಗ್ರಾಮದಲ್ಲಿ ರಿಲಯನ್ಸ್ ಫೌಂಡೇಶನ್ ಹಾಗೂ ಗ್ರಾಮ ಪಂಚಾಯತಿ ಅಟ್ಟರ್ಗ ಸಹಯೋಗದಲ್ಲಿ 65 ದಿನಗಳ ಕಾಲ ಜರುಗಿದ ಸ್ವಸಹಾಯ ಸಂಘದ ಮಹಿಳೆಯರ ಟೈಲರಿಂಗ್ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು ಎಲ್ಲ ಮಹಿಳೆಯರು ಜೀವನದಲ್ಲಿ ಉತ್ತುಂಗ ಶಿಖರಕ್ಕೆ ತಲುಪಬೇಕಾದರೆ ಹಿಂದೇ ಏನಾಗಿದೆ ಅನ್ನುವ ಸಂಗತಿ ಬಿಟ್ಟು 65 ದಿನಗಳ ಕಾಲ ಟೈಲರಿಂಗ್ ತರಬೇತಿ ಪಡೆದ ಮುಂದಿನ ದಿನಗಳಲ್ಲಿ ನಾನು ಯಾವ ರೀತಿಯಲ್ಲಿ ಉತ್ತಮ ಕೌಶಲ್ಯ ಯುತ  ಕ್ರಿಯಾಶೀಲ ಚಟುವಟಿಕೆಯಿಂದ ಉನ್ನತಮಟ್ಟ ತಲುಪಬೇಕಾಗಿದೆ ಎನ್ನುವ ವಿಚಾರವನ್ನು ಅರಿತುಕೊಂಡು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದರು .

ರಿಲಯನ್ಸ್ ಫೌಂಡೇಶನ್ ಬೀದರ್ ಜಿಲ್ಲಾ ಯೋಜನಾಧೀಕಾರೀ  ಶಿವಾನಂದ ಮಠಪತಿ ಮಾತನಾಡಿ ಮಹಿಳೆಯರು ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ ಇಂತಹ ಮಹಾನ್ ಭಾರತೀಯ ನಾರಿಯರು ಎಲ್ಲಾ ಮಹಿಳೆಯರಿಗೆ ಆದರ್ಶರಾಗಿದ್ದಾರೆ, ಇಲ್ಲಿ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರು ಸುಮ್ಮನೆ ಕೂಡದೆ ಇಂದಿನಿಂದ ಲೆ ಟೈಲರಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡು ಬದುಕು ಹಸನಾಗಿ ಗೊಳಿಸಬೇಕೆಂದು .
ತರಬೇತಿ ಪಡೆದ ಎಲ್ಲಾ ಮಹಿಳೆಯರಿಗೂ ಅವರವರ ವ್ಯಾಪ್ತಿಯ ಬ್ಯಾಂಕುಗಳಿಂದ ವ್ಯವಸ್ಥೆ ಮಾಡಲು ಹೇಳಲಾಯಿತು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಲ ಭೀಮ್ ಅವರವರ ಹಸ್ತದಿಂದ ಪ್ರಮಾಣ ಪತ್ರ ವಿತರಿಸಿದರು
ರಿಲಯನ್ಸ್ಸಹಾಯಕ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ, ಗುರುಪ್ರಸಾದ್ ಮೆಂಟೆ, ಪಿಡಿಓ ಬಲಭೀಮ ಪವರ್, ತಾಲೂಕ ಪಂಚಾಯತ್ ಉಪಾಧ್ಯಕ್ಷರು ಮಾರುತಿ ಮಗ ರ, ರಾಜಕುಮಾರ್ ಮಗ ರ, ದಿನಕರ್ ಬಿರಾದರ್, ಮೀರಾಬಾಯಿ ಮಗರ್, ಮಸಾಜಿ, ಗುಣವಂತ ಮಗ ರ, ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು. ಮೀರಾಬಾಯಿ ನಿರೂಪಣೆ ಮಾಡಿದರು. ಗುರುಪ್ರಸಾದ್ ವಂದಿಸಿದರು.

Comments are closed.

Don`t copy text!