ಕಲಬುರಗಿ: ಪರಿಶಿಷ್ಟ ಪಂಗಡ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಕಲಬುರಗಿ ಗ್ರಾಮೀಣ ವ್ಯಾಪ್ತಿಯ ಫರತಾಬಾದದ ಶರಣಸಿರಸಗಿ ಗ್ರಾಮದಲ್ಲಿ ಗುರುವಾರ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಕಲಬುರಗಿ ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣ ವತಿಯಿಂದ ಈ ತರಬೇತಿ ಕಾರ್ಯಕ್ರಮವನ್ನು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಯಜಯಲಕ್ಷ್ಮೀ ಹೇರೂರ ಅವರು ಉದ್ಧಾಟಿಸಿದರು. ಕಾರ್ಯಕ್ರಮದಲ್ಲಿ ಕಾನೂನು ಪರಿವೀಕ್ಷಣಾ ಅಧಿಕಾರಿ ಮಲ್ಲಮ್ಮ ಕಾಡ್ಲಾ, ಉಪನ್ಯಾಸಕ ಭರತೇಶ ಶೀಲವಂತರ್, ಮೇಲ್ವಿಚಾರಕಿಯರಾದ ಶಾಂತಾ ರಾಯಪ್ಪ, ಹೀನಾ ಅತ್ತಾರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
Comments are closed.