ಚಿತ್ತಾಪೂರ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ನಿಧನಕ್ಕೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒರ್ವ ಬಡತನದ ಸಾಮಾನ್ಯ ಕಾರ್ಯಕರ್ತ ಶಾಸಕರಾಗಿ ಬೆಳೆದದ್ದು ಇತಿಹಾಸ ಪುಟಕ್ಕಿಂದು ಸೇರಿದಂತಾಗಿದೆ,
ಎಸಿಸಿ ಕಂಪನಿಯ ಉದ್ಯೋಗಿಯಾಗಿ ಜೀವನ ಆರಂಭಿಸಿದ ವಾಲ್ಮೀಕಿ ನಾಯಕರು, ಕಂಪನಿಯಲ್ಲಿ ನಡೆಯುವ ಯುನಿಯನ್ ಚುನಾವಣೆಗಳಿಂದ ಆಕರ್ಷಿತರಾದರು, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ ನಾಯಕರು, ಮುಂದೆ 1986-87ರಲ್ಲಿ ನಡೆದ ವಾಡಿ ಜಂ ಮಂಡಲ ಪಂಚಾಯತ್ ಚುನಾವಣೆಯಲ್ಲಿ ಜಯಶೀಲರಾಗಿ 1987 ರಲ್ಲಿ ವಾಡಿ ಜಂ ಮಂಡಲ ಪಂಚಾಯತನ ಪ್ರಧಾನರಾಗಿ ಆಯ್ಕೆಯಾಗಿ, ಕರ್ನಾಟಕ ರಾಜ್ಯದಲ್ಲಿಯೇ ಅತ್ಯುತ್ತಮ ಮಂಡಲ ಪಂಚಾಯತ್ ಪ್ರಶಸ್ತಿ ಸ್ವೀಕರಿಸಿ ವಾಡಿ ಜಂ ನ ಹೆಸರಿನ ಪತಾಕೆಯನ್ನು ಕರ್ನಾಟಕಕ್ಕೆ ಅರಿಯುವಂತೆ ಮಾಡಿದರು,
ಆದರು ತಮ್ಮಲ್ಲಿದ್ದ ರಾಜಕೀಯ ಬದ್ದತೆ ಪ್ರಾಮಾಣಿಕತೆ, ಪಕ್ಷ ನಿಷ್ಠೆ, ರಾಷ್ಟ್ರೀಯವಾದಿ ವಿಚಾರಗಳು ಇವರನ್ನು ಬಿಜೆಪಿ ಪಕ್ಷದತ್ತ ಬರ ಸೆಳೆದವು. ದಿ. ಅಟಲಜೀ, ಆಡ್ವಾಣಿಜೀ, ಬಸವರಾಜ ಪಾಟೀಲ್ ಸೇಡಂ, ಯಡಿಯೂರಪ್ಪಜೀ, ಈಶ್ವರಪ್ಪಜೀ, ಅರವಿಂದ ಲಿಂಬಾವಳಿ ಹಾಗೂ ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕರ ಮಾರ್ಗದರ್ಶನದಲ್ಲಿ ಬಿಜೆಪಿ ಸೇರ್ಪಡೆಯಾದರು.
ಅವರನ್ನು ಕಳೆದುಕೊಂಡ ಚಿತ್ತಾಪೂರ ತಾಲೂಕಾ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ ಎಂದು ಸಂತಾಪ ಸೂಚಕ ಪತ್ರದಲ್ಲಿ ತಿಳಿಸಿದ್ದಾರೆ.
Comments are closed.