ಇತ್ತೀಚಿಗೆ ಕಣ್ಣೀರು ಹಾಕಿದ್ದ ವಾಲ್ಮೀಕಿ ನಾಯಕ
ಇವರ ಅಂತ್ಯಕ್ರಿಯೆ ದಿ. 20ನೇ ಮಾರ್ಚ 2021ರ ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಚಿತ್ತಾಪೂರ ತಾಲೂಕಿನ ವಾಡಿ ಜಂಕ್ಷನನಲ್ಲಿ ನಡೆಯಲಿದೆ
ಭಾರತೀಯ ಜನತಾ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಕಣ್ಣೀರು ಹಾಕಿದ್ದರು.
ತಾವು ಜಿಲ್ಲೆಯಲ್ಲಿ ಹಿರಿಯ ನಾಯಕರಾಗಿದ್ದು ಕಲಬುರಗಿ ವಿಭಾಗದ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ ಆದರೆ ಸರ್ಕಾರ ತಮ್ಮನ್ನು ವಿವಿಧ ನಿಗಮ/ಮಂಡಳಿ/ಪ್ರಾಧಿಕಾರಗಳಿಗೆ ನೇಮಕ ಮಾಡುವಾಗ ಪರಿಗಣಿಸುತ್ತಿಲ್ಲ, ತಮ್ಮ ಹಿರಿತನಕ್ಕೆ ಗೌರವ ಸಿಗುತ್ತಿಲ್ಲ ಅಷ್ಟೇ ಅಲ್ಲದೇ ನಿನ್ನ ಮೊನ್ನೆ ಪಕ್ಷಕ್ಕೆ ಬಂದವರನ್ನು ಮಣೆ ಹಾಕಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿ ಕಣ್ಣೀರು ಹಾಕಿದ್ದರು.
ಇವರ ಅಂತ್ಯಕ್ರಿಯೆ ದಿ. 20ನೇ ಮಾರ್ಚ 2021ರ ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಚಿತ್ತಾಪೂರ ತಾಲೂಕಿನ ವಾಡಿ ಜಂಕ್ಷನನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
Comments are closed.