ಚಿತ್ತಾಪುರ: ಪಟ್ಟಣದ ಪುರಸಭೆ ವತಿಯಿಂದ ಯಾರಾದರೂ ಮೃತಪಟ್ಟರೆ ಶವಯಾತ್ರೆ ಮಾಡಲು ಸಾರ್ವಜನಿಕರ ಅನುಕೂಲಕ್ಕೆ ವೈಕುಂಠ ರಥ ವಾಹನ ಸೌಲಭ್ಯ ಮಾಡಿರುವುದು.
ಪಟ್ಟಣದ ಯಾವುದೇ ಸಮಾಜದ ಜನರು ಮೃತಪಟ್ಟಾಗ ಶವಯಾತ್ರೆ ನಡೆಸಲು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಪಟ್ಟಣದ ಪುರಸಭೆ ವತಿಯಿಂದ ವೈಕುಂಠ ರಥ ವಾಹನದ ಸೌಲಭ್ಯ ಮಾಡಿದೆ.
ಪಟ್ಟಣದಲ್ಲಿ ಯಾರಾದರೂ ಮೃತಪಟ್ಟರೇ ಶವಯಾತ್ರೆ ಮಾಡಲು ಆಧುನಿಕ ರೀತಿಯಲ್ಲಿ ಯಾವುದೇ ಸೂಕ್ತ ಸೌಲಭ್ಯ ಇರಲಿಲ್ಲ. ಮೃತ ವ್ಯಕ್ತಿ ಶವಯಾತ್ರೆ ಗೌರವಯುತವಾಗಿ ಮಾಡಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ವೈಕುಂಠ ರಥದ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ತಿಳಿಸಿದ್ದಾರೆ.
ಯಾರಾದರು ಮೃತಪಟ್ಟರೆ ವೈಕುಂಠ ರಥದ ಸೌಲಭ್ಯ ಬೇಕಾದರೆ ತಕ್ಷಣ ಪುರಸಭೆ ಸಿಬ್ಬಂದಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕು. 1200 ರೂ. ದರ ನಿಗಧಿ ಮಾಡಲಾಗಿದೆ. ಒಂದು ವೇಳೆ ಒಂದೇ ದಿವಸ ಇಬ್ಬರು ಮೃತಪಟ್ಟರೆ ಮೊದಲು ಯಾರು ಮಾಹಿತಿ ನೀಡುತ್ತಾರೋ ಅವರಿಗೆ ವೈಕುಂಠ ರಥ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಪಟ್ಟಣದ ಜನಸಂಖ್ಯೆಗನುಗುಣವಾಗಿ ಇನ್ನೂ ಹೆಚ್ಚಿನ ಬೇಡಿಕೆ ಕಂಡು ಬಂದರೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಇನ್ನೋಂದು ವೈಕುಂಠ ರಥ ವಾಹನವನ್ನು ಖರೀದಿಸಿ ಜನರಿಗೆ ಸೌಲಭ್ಯ ನೀಡುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ.
Comments are closed.