Shubhashaya News

ಮಾರ್ಚ್ 22 ಹಾಗೂ 24 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ 110ಕೆ.ವಿ. ಶಹಾಬಾದ-ಶಹಾಪುರ ಮಾರ್ಗದಲ್ಲಿ ತ್ವರಿತ ಕಾಮಗಾರಿ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಕೆಳಕಂಡ ವಿತರಣಾ ಕೇಂದ್ರಗಳ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಲ್ಲಿ ಇದೇ ಮಾರ್ಚ್ 22 ಹಾಗೂ 24 ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕೆಳಕಂಡ ಗ್ರಾಮಗಳ ಜನರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕಲಬುರಗಿ ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ—2ರ ಕಾರ್ಯನಿರ್ವಾಹಕ ಇಂಜಿನಿಯರರು (ವಿ) ತಿಳಿಸಿದ್ದಾರೆ.
ಜೇವರ್ಗಿ ಮತ್ತು ಕೂಡಿ ವಿದ್ಯುತ್ ವಿತರಣಾ ಕೇಂದ್ರ: ಜೇವರ್ಗಿ ನಗರ ಪ್ರದೇಶ ಸೇರಿದಂತೆ ಕೋಳಕೂರ, ಕೂಡಿ, ಹರವಾಳ, ಹರನೂರ, ಕೆಲ್ಲೂರ, ಅಂದೋಲ, ಗಂವಾರ, ಯಳವಾರ, ಮದ್ರಿ, ನರಿಬೋಳ, ಗುಡೂರ, ಬಿರಾಳ (ಬಿ) ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳು.

Comments are closed.

Don`t copy text!